
ಕಠ್ಮಂಡು: ನೇಪಾಳದಲ್ಲಿ ಜಾರಿಗೆ ಬಂದಿರುವ ಹೊಸ ಸಂವಿಧಾನದಲ್ಲಿ ತಿದ್ದುಪಡಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ನೆಪಾಳ ಮದೇಶಿ ಮೋರ್ಚಾ ಇಬ್ಭಾಗವಾಗಿದೆ.
ಮದೇಶಿ ಮೋರ್ಚಾದಲ್ಲಿ 4 ಪ್ರಾದೇಶಿಕ ಪಕ್ಷಗಳಿದ್ದು, ಈ ಪೈಕಿ ಸದ್ಭಾವನ ಪಕ್ಷ ಟೆರೈ ಪ್ರದೇಶದಲ್ಲಿ ಪ್ರತ್ಯೇಕ ಪ್ರತಿಭಟನೆಗೆ ಕರೆ ನೀಡಿದೆ. ಸಂವಿಧಾನದ ತಿದ್ದುಪಡಿಗಾಗಿ ಅಗ್ರಹಿಸಿ ಕಳೆದ ನಾಲ್ಕು ತಿಂಗಳಿಂದ ನೇಪಾಳದ ಟೆರೈ ಪ್ರದೇಶದಲ್ಲಿ ಮೋರ್ಚಾ ನೇತೃತ್ವದ ಪ್ರತಿಭಟನೆ ತೀವ್ರವಾಗಿತ್ತು.
ನೇಪಾಳ- ಭಾರತ ಗಡಿ ಪ್ರದೇಶದಲ್ಲಿ ಪ್ರತಿಭಟನೆ ನಡೆಯುತ್ತಿದ್ದಿದ್ದರಿಂದ ನೇಪಾಳಕ್ಕೆ ಪ್ರಮುಖ ಸರಕುಗಳ ಪೂರೈಕೆ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮದೇಶಿ ಮೋರ್ಚಾ ಗಡಿ ಕೇಂದ್ರಿತ ಪ್ರತಿಭಟನೆಯನ್ನು ವಾಪಸ್ ಪಡೆಯಲು ಮುಂದಾಗಿತ್ತು. ಆದರೆ ಪ್ರತಿಭಟನೆಯನ್ನು ವಾಪಸ್ ಪಡೆಯುವುದಕ್ಕೆ ಸದ್ಭಾವನಾ ಪಕ್ಷ ವಿರೋಧ ವ್ಯಕ್ತಪಡಿಸಿ ಪ್ರತ್ಯೇಕ ಪ್ರತಿಭಟನೆಗೆ ಕರೆ ನೀಡಿದೆ.
ಪ್ರತ್ಯೇಕ ಪ್ರತಿಭಟನೆ ನಡೆಗೆ ಟೀಕೆ ವ್ಯಕ್ತವಾಗಿದ್ದು, ಸದ್ಭಾವನಾ ಪಕ್ಷ ಪ್ರತ್ಯೇಕ ಪ್ರತಿಭಟನೆಗೆ ಕರೆ ನೀಡಬಾರದಿತ್ತು ಎಂದು ಸಂಘೀಯ ಸಮಾಜವಾದಿ ವೇದಿಕೆಯ ಅಧ್ಯಕ್ಷ ಉಪೇಂದ್ರ ಯಾದವ್ ಹೇಳಿದ್ದಾರೆ.
Advertisement