ಬ್ರಿಟನ್ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ ಐಎಸ್: ವಿಡಿಯೋ ಬಿಡುಗಡೆ

ಭಾನುವಾರ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊಸ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು ಬ್ರಿಟನ್ ಮೇಲೆ ದಾಳಿ ಮಾಡುವುದಾಗಿ ತಿಳಿಸಿದೆ ಎಂದು ಸಿರಿಯಾ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಡಮಾಸ್ಕಸ್: ಭಾನುವಾರ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊಸ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು ಬ್ರಿಟನ್ ಮೇಲೆ ದಾಳಿ ಮಾಡುವುದಾಗಿ ತಿಳಿಸಿದೆ ಎಂದು ಸಿರಿಯಾ ಮಾನವ ಹಕ್ಕುಗಳ ಪರಿವೀಕ್ಷಣಾ ಸಂಸ್ಥೆ ತಿಳಿಸಿದೆ.

ಈ ವಿಡಿಯೋದಲ್ಲಿ ಹೆಸರು ಹೇಳದ ಐ ಎಸ್ ಉಗ್ರನೊಬ್ಬ ಬ್ರಿಟಿಶ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರನ್ನು 'ಮೂರ್ಖ' ಎಂದು ಕರೆದಿದ್ದು, ನಂತರ ಕಿತ್ತಳೆ ಬಣ್ಣದ ಬಟ್ಟೆ ತೊಟ್ಟಿದ್ದ ಐವರನ್ನು ಹತ್ಯೆಗೈದಿದ್ದಾನೆ. ಈ ಐವರು ಬ್ರಿಟನ್ ಗೋಸ್ಕರ ಐ ಎಸ್ ಮೇಲೆ ಬೇಹುಗಾರಿಕೆ ನಡೆಸಿದ್ದರು ಎಂದು ಐ ಎಸ್ ಆರೋಪಿಸಿದೆ.

ಈ ವಿಡಿಯೋವನ್ನು ಉಗ್ರರ ರಾಜಧಾನಿಯಾದ ಸಿರಿಯಾದ 'ರಕ್ಕಾ'ದಲ್ಲಿ ಚಿತ್ರೀಕರಣ ಮಾಡಲಾಗಿದೆ.

ಸಿರಿಯಾದಲ್ಲಿ ಐ ಎಸ್ ವಿರುದ್ಧ ದಾಳಿ ಮಾಡುವುದು ಬ್ರಿಟನ್ನಿನ ನೈತಿಕ ಮತ್ತು ಸೇನಾ ಕರ್ತವ್ಯ ಎಂದು ಕ್ಯಾಮರೂನ್ ಕಳೆದ ತಿಂಗಳಷ್ಟೇ ತಿಳಿಸಿದ್ದಲ್ಲದೆ, ಬ್ರಿಟನ್ನಿನ ವಾಯುಪಡೆ ಈಗಾಗಲೇ ಇರಾಕ್ ಮತ್ತು ಸಿರಿಯಾಗಳಲ್ಲಿ ಐ ಎಸ್ ಮೇಲೆ ದಾಳಿ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com