ಝುಕರ್ ಬರ್ಗ್ ಮನೆಗೆ ರೋಬೊ ಕೆಲಸದಾಳು!

ಫೇಸ್‍ಬುಕ್ ಸಂಸ್ಥಾಪಕ ಹಾಗೂ ಸಿಇಓ ಮಾರ್ಕ್ ಝುಕರ್‍ಬರ್ಗ್ ಪ್ರತಿ ವರ್ಷದಂತೆ ಈ ವರ್ಷವೂ ಹೊಸತೊಂದು ವಿಶೇಷ ಸಂಕಲ್ಪ...
ಮಾರ್ಕ್ ಝುಕರ್‍ಬರ್ಗ್
ಮಾರ್ಕ್ ಝುಕರ್‍ಬರ್ಗ್
ನ್ಯೂಯಾರ್ಕ್: ಫೇಸ್‍ಬುಕ್ ಸಂಸ್ಥಾಪಕ ಹಾಗೂ ಸಿಇಓ ಮಾರ್ಕ್ ಝುಕರ್‍ಬರ್ಗ್ ಪ್ರತಿ ವರ್ಷದಂತೆ ಈ ವರ್ಷವೂ ಹೊಸತೊಂದು ವಿಶೇಷ ಸಂಕಲ್ಪ ಮಾಡಿದ್ದಾರೆ. ಮಾರ್ಕ್, ತಮ್ಮ ಮನೆಗೊಂದು ಯಂತ್ರಮಾನವ ಸೇವಕನನ್ನು ತಾವೇ ತಯಾರಿಸಿಕೊಳ್ಳಲು ನಿರ್ಧರಿಸಿದ್ದಾರೆ. 
ಹಾಲಿವುಡ್‍ನ ಹಿಟ್ ಚಿತ್ರ ಐರನ್ ಮ್ಯಾನ್ ನಿಂದ ಪ್ರಭಾವಿತರಾಗಿರುವ ಝುಕರ್ ಬರ್ಗ್ ಅದರಲ್ಲಿನ ಒಂದು ಪಾತ್ರವಾದ ಜಾರ್ವಿಸ್ ಎಂಬ ಮನೆಯಾಳಿನ ಹಾಗೆ ಈ ರೊಬೋಟ್ ಇರಬೇಕೆಂದು ಕನಸುಕಂಡಿದ್ದಾರೆ. ಮನೆ ಕೆಲಸ ಮಾಡುವುದರ ಜೊತೆಗೆ ಮನೆಗೆ ಬರುವವರ ಗುರುತಿಟ್ಟುಕೊಂಡು ಅವರ ದನಿ ಕೇಳಿ ಮುಖ ನೋಡಿ ಬಾಗಿಲು ತೆಗೆಯುವಷ್ಟು ಜಾಣನನ್ನಾಗಿಸಬೇಕೆಂದೂ ಅವರು ಯೋಚಿಸಿದ್ದಾರೆ. 
ತಮ್ಮ ದನಿಯನ್ನು ಗುರುತಿಸಿ ತಮ್ಮೆಲ್ಲ ಆದೇಶವನ್ನು ಪಾಲಿಸುವಂತೆ ಅದನ್ನು ರೂಪಿಸಿ ಆ ನಂತರ ಅದಕ್ಕೆ ಸಂಗೀತ, ಬೆಳಕು, ತಾಪಮಾನ ಇತ್ಯಾದಿಗಳ ಅರಿವು ಮೂಡಿಸುವ ಯೋಚನೆಯಲ್ಲಿ ಝುಕರ್‍ಬರ್ಗ್ ಇದ್ದಾರೆ. ಈ ವರ್ಷ ಅವರು ರೋಬೋ ಸೃಷ್ಟಿಗೆ ಸಮಯ ವ್ಯಯಿಸಲಿದ್ದಾರೆ. ಕಳೆದ ವರ್ಷ ಅವರು ತಿಂಗಳಿಗೆರಡು ಪುಸ್ತಕ ಓದಿಮುಗಿಸುವ ಸಂಕಲ್ಪ ತೊಟ್ಟಿದ್ದರು. 
ಅದಕ್ಕೂ ಮುನ್ನ ಮಾ್ಯಂಡರಿನ್ ಕಲಿಯುವುದಾಗಿ ಘೋಷಿಸಿ ಅದನ್ನು ಸಾಧಿಸಿದ್ದರು. ಎಲ್ಲಕ್ಕಿಂತ ವಿಶೇಷವಾಗಿ ಪ್ರತಿ ದಿನ ಒಬ್ಬ ವ್ಯಕ್ತಿಯನ್ನು ಭೇಟಿಯಾಗುತ್ತೇನೆ ಎಂಬ ರೆಸಲೂಷನ್ ಮಾಡಿ ಅದನ್ನು ಇಂದಿಗೂ ಪಾಲಿಸಿಕೊಂಡೇ ಬರುತ್ತಿದ್ದಾರಂತೆ. 
ವೃತ್ತಿ ಸಂಬಂಧಿ ಸಾಧನೆಗಳು ಇದ್ದದ್ದೇ. ಅದರಿಂದಾಚೆಗೆ ಏನಾದರೂ ಸಾಧಿಸಬೇಕು ಎಂಬುದೇ ಈ ಥರದ ಸಂಕಲ್ಪಕ್ಕೆ ಸ್ಫೂರ್ತಿ ಎಂದು ಅವರು ಹೇಳಿಕೊಂಡಿದ್ದಾರೆ. ಪ್ರತಿ ವರ್ಷದ ಸಂಕಲ್ಪಕ್ಕೆ ಸಂಕಲ್ಪಕ್ಕೂ ಒಂದು ಥೀಮ್ ಇಟ್ಟುಕೊಳ್ಳುವ ಅವರ ಈ ಬಾರಿಯ ಕಲ್ಪನೆ ಸಂಶೋಧನೆಯಂತೆ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com