
ನವದೆಹಲಿ: ತನ್ನ ಮೊದಲ ಭೂಗರ್ಭ ಹೈಡ್ರೋಜನ್ ಬಾಂಬ್ ನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿರುವುದಾಗಿ ಉತ್ತರ ಕೊರಿಯಾ ಘೋಷಿಸಿದ ಬೆನ್ನಲ್ಲೇ ವಿಶ್ವಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಕಳೆದ ತಿಂಗಳೇ ತಮ್ಮ ದೇಶ ಹೈಡ್ರೋಜನ್ ಬಾಂಬ್ ನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಘೋಷಿಸಿತ್ತು.
ಉತ್ತರ ಕೊರಿಯಾ ಈಗಾಗಲೇ ಮೂರು ಪರಮಾಣು ಬಾಂಬ್ ಗಳ ಪರೀಕ್ಷೆ ನಡೆಸಿದೆ. ಆದರೆ ಹೈಡ್ರೋಜನ್ ಬಾಂಬ್ ಪರಮಾಣು ಬಾಂಬ್ ಗಿಂತ ಹೆಚ್ಚು ಅಪಾಯಕಾರಿಯಾಗಿದೆ. ಇದಕ್ಕೆ ಕಾರಣಗಳು ಈ ರೀತಿ ಇವೆ:
1. ಹೈಡ್ರೋಜನ್ ಬಾಂಬ್ ಹೆಚ್ಚು ಪ್ರಬಲವಾದ ಪರಮಾಣು ಶಸ್ತ್ರಾಸ್ತ್ರವಾಗಿದೆ.
2. ಹೈಡ್ರೋಜನ್ ಬಾಂಬ್ ನಿಂದ ಹೊರಸೂಸುವ ಶಕ್ತಿಯು ಪರಮಾಣು ಬಾಂಬ್ ಗಿಂತ ಹೆಚ್ಚು ಸಾಂದ್ರತೆ ಹೊಂದಿದೆ. ಒಂದು ಹೈಡ್ರೋಜನ್ ಬಾಂಬ್ ಸ್ಪೋಟಿಸಿದರೆ ಇಡೀ ನಗರವೊಂದನ್ನು ಸುಟ್ಟು ಹಾಕಬಹುದು.
3. ಹೈಡ್ರೋಜನ್ ಬಾಂಬ್ ತನ್ನ ಶಕ್ತಿಯನ್ನು ಪರಮಾಣುಗಳ ಬೆಸುಗೆ ಮೂಲಕ ಪಡೆದಿದೆ. ಆದರೆ ಪರಮಾಣು ಬಾಂಬ್ ತನ್ನ ಶಕ್ತಿಯನ್ನು ವಿದಳನದ ಮೂಲಕ ಪಡೆದುಕೊಳ್ಳುತ್ತದೆ.
4. ಪರಮಾಣು ಬೆಸುಗೆ ಮತ್ತು ವಿದಳನ ಬೇರೆ ಬೇರೆ ವಿಧವಾದ ಪ್ರಕ್ರಿಯೆಯಾಗಿದ್ದು, ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಪರಮಾಣು ಬಾಂಬ್ ನಲ್ಲಿ ವಿಂಗಡನೆಗೊಳ್ಳುವುದರಿಂದ ಶಕ್ತಿ ಕಡಿಮೆಯಾಗಿದೆ.
5. ಹೈಡ್ರೋಜನ್ ಬಾಂಬ್ ಗಳಲ್ಲಿ ಪರಮಾಣು ಒಟ್ಟು ಸೇರುವುದರಿಂದ ಅವುಗಳ ಶಕ್ತಿ ಹೆಚ್ಚು.
6. ಪರಮಾಣು ಬೆಸುಗೆ ಅಥವಾ ಒಟ್ಟು ಸೇರುವಿಕೆ ಅತ್ಯಾಧುನಿಕವಾಗಿದ್ದು, ತಯಾರಿಸಲು ಕಷ್ಟವಾಗಿದೆ. ಇದಕ್ಕೆ ಅತಿ ಹೆಚ್ಚು ಉಷ್ಣತೆ ಬೇಕು. ಮಿಲಿಯನ್ ಡಿಗ್ರಿ ಸಾಂದ್ರತೆಯಲ್ಲಿ ಅದನ್ನು ತಯಾರಿಸಲಾಗುತ್ತದೆ.
7. ಹೈಡ್ರೋಜನ್ ಬಾಂಬ್ ಗಳನ್ನು ಚಿಕ್ಕ ಗಾತ್ರಗಳಲ್ಲಿ ತಯಾರಿಸುವುದು ಸುಲಭ. ಕ್ಷಿಪಣಿಗಳಲ್ಲಿ ಬಳಸುವುದು ಕೂಡ ಸುಲಭ.
8. ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿಯಲ್ಲಿ ಯುದ್ಧದ ಸಂದರ್ಭದಲ್ಲಿ ಬಳಸಿದ್ದು ಪರಮಾಣು ಬಾಂಬುಗಳನ್ನು. ಇಲ್ಲಿಯವರೆಗೆ ಯಾವುದೇ ಯುದ್ಧಗಳಲ್ಲಿ ಹೈಡ್ರೋಜನ್ ಬಾಂಬ್ ಗಳನ್ನು ಬಳಸಿಲ್ಲ.
9. ಉತ್ತರ ಕೊರಿಯಾದ ನಾಲ್ಕನೇ ಪರಮಾಣು ಪರೀಕ್ಷೆ ಇದಾಗಿದ್ದು, ಮೊದಲ ಫ್ಯೂಶನ್ ಬಾಂಬ್ ಇದಾಗಿದೆ.
Advertisement