ಬ್ರಿಟನ್ ಯುವರಾಜ ಜಾರ್ಜ್
ಬ್ರಿಟನ್ ಯುವರಾಜ ಜಾರ್ಜ್

ನರ್ಸರಿ ಶಾಲೆಯಲ್ಲಿ ಮೊದಲ ದಿನ ಕಳೆದ ಬ್ರಿಟನ್ ಯುವರಾಜ

ಬ್ರಿಟನ್ ರಾಜಕುಮಾರ್ ಎರಡು ವರ್ಷದ ಜಾರ್ಜ್ ಬುಧವಾರ ನರ್ಸರಿ ಶಾಲೆಗೆ ಹಾಜರಾಗಿದ್ದಾನೆ. ಜಾರ್ಜ್ ತಾಯಿ ರಾಣಿ ಕೇಟ್ ರಾಜಕುಮಾರ ನರ್ಸರಿಗೆ ತೆರಳುವ ...

ಲಂಡನ್:  ಬ್ರಿಟನ್ ರಾಜಕುಮಾರ್ ಎರಡು ವರ್ಷದ ಜಾರ್ಜ್ ಬುಧವಾರ ನರ್ಸರಿ ಶಾಲೆಗೆ ಹಾಜರಾಗಿದ್ದಾನೆ. ಜಾರ್ಜ್ ತಾಯಿ ರಾಣಿ ಕೇಟ್ ರಾಜಕುಮಾರ ನರ್ಸರಿಗೆ ತೆರಳುವ ಫೋಟೋವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.

ರಾಯಲ್ ಅಧಿಕಾರಿಗಳು ರಾಜಕುಮಾರ ಜಾರ್ಜ್ ನ ಎರಡು ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಕಡು ನೀಲಿ ಬಣ್ಣದ ಜಾಕೆಟ್ ತೊಟ್ಟಿರುವ ಯುವರಾಜ ಜಾರ್ಜ್ ಆಕಾಶ ನೀಲಿ ಬಣ್ಣದ ರಕ್ ಸ್ಯಾಕ್ ಬ್ಯಾಗ್ ತೊಟ್ಟು ಪೂರ್ವ ಇಂಗ್ಲೆಂಡ್ ನಲ್ಲಿರುವ ವೆಸ್ಟಾಕ್ರೆ ಮಾಂಟೆಸ್ಸರಿ ಗೆ ತೆರಳಿದ್ದಾನೆ.

ವೆಸ್ಟಾಕ್ರೆ ಮಾಂಟೆಸ್ಸರಿ ಯು ರಾಣಿ 2ನೇ ಎಲಿಜಿಬೆತ್ ಖಾಸಿ ಎಸ್ಟೇಟ್ ಪಕ್ಕದಲ್ಲಿದ್ದು, ಜಾರ್ಜ್ ತಂದೆ ವಿಲಿಯಮ್  ಇದೇ ನರ್ಸರಿಗೆ ತೆರಳಿದ್ದರು.  ಪ್ರತಿಷ್ಠಿತ ಮಾಂಟೆಸ್ಸರಿಯಲ್ಲಿ ಒಂದು ಗಂಟೆಗೆ 5.50 ಪೌಂಡ್ ಹಣ ಚಾರ್ಜ್ ವಿಧಿಸಲಾಗುತ್ತದೆ.

ತಮ್ಮ ಅಜ್ಜ ಪ್ರಿನ್ಸ್ ಚಾರ್ಲ್ಸ್ ಮತ್ತು ತಂದೆ ವಿಲಿಯಂ ನಂತರ ಸಿಂಹಾಸನ ವೇರಲು ಬ್ರಿಟನ್ 3ನೇ ತಲೆಮಾರಿನ ಜಾರ್ಜ್ ಈಗಿನಿಂದಲೇ ಸಿದ್ಧತೆ ನಡೆಸುತ್ತಿದ್ದಾನೆ.  ಮೊದಲ ದಿನ ಶಾಲೆಗೆ ತೆರಳಿದ ಯುವರಾಜ ಜಾರ್ಜ್ ಅನ್ನು ರಾಜ ವಿಲಿಯಂ ಕರೆದೊಯ್ದಿದ್ದಾರೆ. ಜಾರ್ಜ್ ನ ಹಿರಿಯ ತಲೆಮಾರಿನವರು ನರ್ಸರಿ ಶಾಲೆಗೆ ಹೋಗಿರಲಿಲ್ಲ. ಅವರೆಲ್ಲಾ ನೇರವಾಗಿ ಶಾಲೆಗೆ ತೆರಳಿದ್ದರು. ಆದರೆ ತನ್ನ ತಂದೆಯ ದಾರಿಯನ್ನು ಅನುಸರಿಸಿರುವ ಜಾರ್ಜ್ ನರ್ಸರಿ ಗೆ ಹೋಗುತ್ತಿದ್ದಾನೆ.

Related Stories

No stories found.

Advertisement

X
Kannada Prabha
www.kannadaprabha.com