
ಪ್ಯೊಂಗ್ಯಾಂಗ್: ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿರುವುದನ್ನು ಸ್ವರಕ್ಷಣೆಯ ಕ್ರಮ ಎಂದು ಉತ್ತರ ಕೊರಿಯಾ ಸಮರ್ಥಿಸಿಕೊಂಡಿದೆ.
ಪೀಪಲ್ಸ್ ಸೇನಾ ಪಡೆ ಸಚಿವಾಲಯಕ್ಕೆ ಭೇಟಿ ನೀಡಿ ಸೇನಾ ಅಧಿಕಾರಿಗಳೊಂದಿಗೆ ಮಾತನಾಡಿದ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್, ಅಮೆರಿಕ ನೇತೃತ್ವದ ಸಾಮ್ರಾಜ್ಯವಾದಿಗಳು ಉಂಟು ಮಾಡಬಹುದಾದ ಪರಮಾಣು ಯುದ್ಧದಿಂದ ಕೊರಿಯನ್ ದ್ವೀಪದಲ್ಲಿ ಶಾಂತಿ ರಕ್ಷಿಸಿಕೊಳ್ಳಲು ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಇದು ಸಾರ್ವಭೌಮ ರಾಷ್ಟ್ರದ ಕಾನೂನುಬದ್ಧ ಹಕ್ಕಾಗಿದ್ದು ಯಾರೂ ಸಹ ಪ್ರಶ್ನಿಸುವಂತಿಲ್ಲ ಎಂದು ಸೇನಾ ಅಧಿಕಾರಿಗಳಿಗೆ ಕಿಮ್ ತಿಳಿಸಿದ್ದು, ಸೇನೆಯ ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಸಾಮರ್ಥ್ಯವನ್ನು ವರ್ಧಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಜ.6 ರಂದು ಉತ್ತರ ಕೊರಿಯಾ ಯಶಸ್ವಿ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿರುವುದಾಗಿ ಘೋಷಿಸಿತ್ತು. ಈ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದಿಂದ ಖಂಡನೆ ವ್ಯಕ್ತವಾಗಿದೆ.
Advertisement