
ಬುರ್ಕಿನಾ ಫಾಸೊ(ಆಫ್ರಿಕಾ): ಬುರ್ಕಿನಾ ಫಾಸೊದ ವಾಗಡೂಗು ನಗರದ ಹೊಟೇಲ್ ಒಂದರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ.
ಪಶ್ಚಿಮ ಆಫ್ರಿಕಾದ ಬುರ್ಕಿನಾ ರಾಜಧಾನಿ ಫಾಸೊ ದೇಶದ ಪ್ರಮುಖ ಹೊಟೇಲ್ ಸ್ಪೇನ್ಡಿಡ್ ನಲ್ಲಿ ಅಲ್ ಖೈದಾ ಭಯೋತ್ಪಾದನೆ ಸಂಘಟನೆ ಮುಸುಕುಧಾರಿ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 20 ಮಂದಿ ಮೃತಪಟ್ಟಿದ್ದು, 15 ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ.
ಉಗ್ರ ದಾಳಿ ನಡೆಯುತ್ತಿದ್ದಂತೆ ಬುರ್ಕಿನಾ ಭದ್ರತಾ ಪಡೆಗಳು ಹೊಟೇಲ್ ಸುತ್ತುವರೆದಿದ್ದು, ಕಾರ್ಯಾಚರಣೆ ಕೈಗೊಂಡಿದ್ದಾರೆ.
Advertisement