ಒಬಾಮಗೆ ಹನುಮನೇ ಸ್ಫೂರ್ತಿಯಂತೆ!

ಅಮೆರಿಕ ಅಧ್ಯಕ್ಷ ಒಬಾಮ ಅವರು ನಿತ್ಯವೂ ತಮ್ಮ ಜತೆ ಕೆಲವೊಂದು ಪರಿಕರಗಳನ್ನು ಒಯ್ಯುತ್ತಾರೆ...
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಒಬಾಮ ಅವರು ನಿತ್ಯವೂ ತಮ್ಮ ಜತೆ ಕೆಲವೊಂದು ಪರಿಕರಗಳನ್ನು ಒಯ್ಯುತ್ತಾರೆ. ಅದರಲ್ಲಿ, ಆಂಜನೇಯನ ಪುಟ್ಟ ಪ್ರತಿಮೆಯೂ ಒಂದು.

ತಾವು ಖಿನ್ನರಾದಾಗ, ಅಧೀರರಾದಾಗ ಸ್ಫೂರ್ತಿ ಪಡೆಯಲು ಈ ಪ್ರತಿಮೆ ನೋಡುತ್ತಾರೆ. ಈ ಸಂಗತಿಯನ್ನು ಸ್ವತಃ ಬರಾಕ್ ಒಬಾಮಾ ಅವರೇ ಬಹಿರಂಗಪಡಿಸಿದ್ದಾರೆ.

ಒಬಾಮಾ ಅಧ್ಯಕ್ಷ ಅವಧಿಯ ಕೊನೇ ಭಾಷಣದ ಅಂಗವಾಗಿ ಅವರು ಶುಕ್ರವಾರ ಯ್ಯೂಟ್ಯೂಬ್‍ಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಒಬಾಮ, ಸಂಕಷ್ಟದಲ್ಲಿ ತಾವು ಈ ಪರಿಕರಗಳಿಂದ ಸ್ಫೂರ್ತಿ ಪಡೆಯುವುದಾಗಿ ತಿಳಿಸಿದ್ದಾರೆ.

ಅವರು ಈ ವಿಷಯ ಬಹಿರಂಗಪಡಿಸುತ್ತಿದ್ದಂತೆ, ಆ ವಸ್ತುಗಳನ್ನು ಪ್ರದರ್ಶಿಸುವಂತೆ ಸಂದರ್ಶಕರು ಕಾರ್ಯಕ್ರಮದ ನಡುವೆಯೇ ಮನವಿ ಮಾಡಿದರು. ಕೂಡಲೇ ಜೇಬುಗಳಿಗೆ ಕೈ ಹಾಕಿದ ಅವರು, ಹನುಮನ ವಿಗ್ರಹ ಸೇರಿ ಒಂದೊಂದಾಗಿಯೇ ಎಲ್ಲ ಪರಿಕರಗಳನ್ನು ಹೊರತೆಗೆದರು.

ಈ ಒಂದೊಂದು ವಸ್ತುಗಳೂ ನಾನು ಇಲ್ಲಿವರೆಗೆ ಸಾಗಿ ಬಂದ ಹಾದಿಯಲ್ಲಿ ಭೇಟಿಯಾದ ಜನರನ್ನು ನೆನಪಿಸುತ್ತದೆ,'' ಎಂದರು. ಮೊದಲು ಯೇಸು ಕ್ರಿಸ್ತನ ಮಣಿ ಮಾಲೆ ತೆಗೆದು ತೋರಿಸಿದ ಒಬಾಮ , `` ಇದು ವೈಟ್‍ಹೌಸ್‍ಗೆ ಭೇಟಿ ನೀಡಿದ್ದ ಪೋಪ್ ಫ್ರಾನ್ಸಿಸ್ ನೀಡಿದ್ದು,'' ಎಂದರು.

ನಂತರ ಪುಟ್ಟ ಬುದ್ಧನ ಮೂರ್ತಿ ತೋರಿಸಿ, ಇದನ್ನು ಓರ್ವ ಸನ್ಯಾಸಿ ನೀಡಿದ್ದಾಗಿ ತಿಳಿಸಿದರು. ಅದಾದ ನಂತರ ಬೆಳ್ಳಿ ಚಿಪ್ ತೋರಿಸಿ ಇದು ಅಯೋವಾದ ಬೈಕರ್ ನೀಡಿದ್ದರು ಎಂದರು. ನಂತರ, ಹನುಮನ ಮೂರ್ತಿಯನ್ನು ಹೊರತೆಗೆದು ತೋರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com