
ಜಲಾಲಬಾದ್ : ಅಫ್ಘಾನಿಸ್ತಾನದ ಜಲಾಲಾಬಾದ್‌ನಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಗೊಂಡ ಪರಿಣಾಮ 11 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಜಲಾಲಾಬಾದ್ ಪ್ರಾಂತೀಯ ಮಂಡಳಿಯ ಸದಸ್ಯ ಒಬೈದುಲ್ಲಾ ಶಿನ್ವಾರಿ ಕಚೇರಿ ಮುಂದೆ ಆತ್ಮಾಹುತಿ ಬಾಂಬಾ ಸ್ಫೋಟಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ತಾಲಿಬಾನ್ ಉಗ್ರರ ಸೆರೆಯಲ್ಲಿದ್ದ ಬುಡಕಟ್ಟು ಜನಾಂಗದ ಹುಡುಗನೊಬ್ಬ ಬಿಡುಗಡೆ ಹೊಂದಿದ ಸಂಭ್ರಮಾಚರಣೆಗೆ ನೆರೆದಿದ್ದ ಗುಂಪಿನ ಮಧ್ಯೆ ವ್ಯಕ್ತಿಯೊಬ್ಬ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾನೆ ಎಂದು ಪ್ರಾಂತೀಯ ಗವರ್ನರ್ ಅತಾವುಲ್ಲಾ ಖೊಗ್ಯಾನಿ ತಿಳಿಸಿದ್ದಾರೆ.
ಇದುವರೆಗೂ ಸ್ಫೋಟದ ಹೊಣೆಯನ್ನು ಯಾವೊಂದು ಸಂಘಟನೆಯೂ ಹೊತ್ತಿಲ್ಲ. ಆಫ್ಘಾನಿಸ್ತಾನದಲ್ಲಿ ಮೇಲಿಂದ ಮೇಲೆ ಬಾಂಬ್ ದಾಳಿ ನಡೆಯುತ್ತಿರುವುದರಿಂದ ತಾಲಿಬಾನ್ ಉಗ್ರರ ಜತೆ ಶಾಂತಿ ಒಪ್ಪಂದ ಮಾತುಕತೆಗೆ ತೊಡಕಾಗುತ್ತಿದೆ.
Advertisement