ದೈವನಿಂದಕನಲ್ಲ ಎಂಬುದನ್ನು ಸಾಬೀತುಪಡಿಸಲು ಬೆರಳು ಕತ್ತರಿಸಿಕೊಂಡ ಮುಸ್ಲಿಂ ಬಾಲಕ!

ದೈವ ನಿಂದನೆ ಅಥವಾ ಧರ್ಮನಿಂದನೆ ಎಂಬುದು ಪಾಕಿಸ್ತಾನದಂತಹ ರಾಷ್ಟ್ರಗಳಲ್ಲಿ ಎಂಥಹ ಪ್ರಮಾದ ಉಂಟುಮಾಡುತ್ತದೆ ಎಂಬುದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ.
ಮುಸ್ಲಿಮರಿಂದ ಪ್ರಾರ್ಥನೆ (ಸಾಂಕೇತಿಕ ಚಿತ್ರ)
ಮುಸ್ಲಿಮರಿಂದ ಪ್ರಾರ್ಥನೆ (ಸಾಂಕೇತಿಕ ಚಿತ್ರ)

ಇಸ್ಲಾಮಾಬಾದ್: ದೈವ ನಿಂದನೆ ಅಥವಾ ಧರ್ಮನಿಂದನೆ ಎಂಬುದು ಪಾಕಿಸ್ತಾನದಂತಹ ರಾಷ್ಟ್ರಗಳಲ್ಲಿ ಎಂಥಹ ಪ್ರಮಾದ ಉಂಟುಮಾಡುತ್ತದೆ ಎಂಬುದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ.
ಆಗಿದ್ದಿಷ್ಟು, ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ ಜ.10 ರಂದು ಬಾಲಕನೊಬ್ಬ ನಮಾಜ್ ಮಾಡಲು ಮಸೀದಿಗೆ ತೆರಳಿದ್ದಾನೆ, ಸಾಮೂಹಿಕ ಪ್ರಾರ್ಥನೆ ವೇಳೆ ಮಸೀದಿಯ ಇಮಾಮ್(ಧರ್ಮ ಗುರು) ಅಹ್ಮದ್, "ಪ್ರವಾದಿ ಮೊಹಮ್ಮದ್ ಅವರನ್ನು ಯಾರು ಇಷ್ಟ ಪಡುವುದಿಲ್ಲ ಕೈ ಎತ್ತಿ" ಎಂದು ಕೇಳಿದ್ದಾರೆ. ಇದನ್ನು ಪ್ರವಾದಿ ಮೊಹಮ್ಮದ್ ರನ್ನು ಯಾರು ಇಷ್ಟಪಡುತ್ತೀರಿ ಕೈ ಎತ್ತಿ ಎಂದು ಕೇಳಿರುವುದಾಗಿ ತಪ್ಪಾಗಿ ಅರ್ಥೈಸಿಕೊಂಡಿರುವ 15 ವರ್ಷದ ಬಾಲಕ ಅನ್ವರ್ ಅಲಿ ಕೈ ಎತ್ತಿದ್ದಾನೆ. ಇದನ್ನು ಗಮನಿಸಿದ ಇಮಾಮ್, ನೀನು ದೈವ ನಿಂದಕ ಎಂದು ಕಿರುಚಿದ್ದಾರೆ. ಇದರಿಂದ ಅಪರಾಧಿ ಭಾವನೆಗೊಳಗಾದ ಬಾಲಕ ತಕ್ಷಣವೇ ಮನೆಗೆ ಓಡಿದ್ದಾನೆ. ನಂತರ ತನ್ನ ಬಲಗೈ ನ ಬೆರಳನ್ನು ಕತ್ತರಿಸಿಕೊಂಡು ಪಶ್ಚಾತ್ತಾಪ ಪಟ್ಟಿದ್ದು, ಕತ್ತರಿಸಿದ ಬೆರಳಿನ ಸಮೇತ ಮಸೀದಿಗೆ ಬಂದ ಬಾಲಕ ಗಾಯಗೊಂಡ ಕೈಯನ್ನು ಇಮಾಮ್ ಗೆ ತೋರಿಸಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಮಾಮ್ ನನ್ನು ಬಂಧಿಸಿದ್ದರಾದರೂ, ಸ್ಥಳಿಯ ಧಾರ್ಮಿಕ ಮುಖಂಡರ ಒತ್ತಡದಿಂದ ಬಿಡುಗಡೆಗೊಳಿಸಿದ್ದಾರೆ. ಇಮಾಮ್ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲದೇ ಇದ್ದರು, ಬಾಲಕ ಬೆರಳು ಕತ್ತರಿಸಿಕೊಳ್ಳುವುದಕ್ಕೆ ಪ್ರಚೋದನೆ ನೀಡಿದ ಆರೋಪದ ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೋಷಕರು, ಯಾರ ವಿರುದ್ಧವೂ ಆರೋಪ ಮಾಡದೆ, ಪ್ರವಾದಿ ಮೊಹಮ್ಮದ್ ರನ್ನು ಇಷ್ಟೊಂದು ಪ್ರೀತಿಸುವ ಮಗನನ್ನು ಪಡೆದ ನಾವು ಅದೃಷ್ಟವಂತರು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com