
ಕೈರೋ: ಈಜಿಪ್ಟ್ನ ಗಿಜಾ ಪ್ರಾಂತ್ಯದ ಅಪಾರ್ಟ್ ಮೆಂಟ್ ವೊಂದರಲ್ಲಿ ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡ ವೇಳೆ ಬಾಂಬ್ ಸ್ಫೋಟದಲ್ಲಿ 7 ಮಂದಿ ಪೊಲೀಸರು ಸೇರಿ 10 ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ.
2011ರ ಕ್ರಾಂತಿಯ ವಾರ್ಷಿಕೋತ್ಸವಕ್ಕೆ ಇನ್ನು ಒಂದು ವಾರವಿರುವಂತೆ ಅಲ್-ಹರಾಮ್ ಜಿಲ್ಲೆಯಲ್ಲಿ ಸ್ಫೋಟ ಸಂಭವಿಸಿದೆ.
ಪದಚ್ಯುತ ಅಧ್ಯಕ್ಷ ಮೊಹಮದ್ ಮೊರ್ಸಿ ಅವರ ಇಸ್ಲಾಮಿಕ್ ಮುಸ್ಲಿಂ ಬ್ರದರ್ಹುಡ್ ಬಾಂಬ್ ಸ್ಪೋಟಕ್ಕೆ ಕಾರಣ ಎಂದು ಈಜಿಪ್ಟ್ ಸರ್ಕಾರ ಹೇಳಿದೆ.
ಮುಂದಿನ ದಿನಗಳಲ್ಲಿ ದುಷ್ಕೃತ್ಯಗಳನ್ನು ಎಸಗಲು ಸಜ್ಜಾಗಿದ್ದ ಇಸ್ಲಾಮಿಸ್ಟ್ ಮುಸ್ಲಿಂ ಬ್ರದರ್ಹುಡ್ನ ಸದಸ್ಯರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement