
ಢಾಕಾ: ದೇಶದ್ರೋಹ ಆರೋಪದ ಮೇಲೆ ಬಾಂಗ್ಲಾದೇಶ ಮಾಜಿ ಪ್ರಧಾನಿ, ವಿರೋಧ ಪಕ್ಷದ ನಾಯಕಿ ಖಾಲೀದಾ ಜಿಯಾ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಾಂಗ್ಲಾದೇಶ ವಿಮೋಚನಾ ಚಳುವಳಿಯ ಹುತಾತ್ಮರ ಕುರಿತು ನಿಂದನೆಯ ಮಾತುಗಳನ್ನಾಡಿದ್ದರು. ಈ ಹೇಳಿಕೆ ಹಿನ್ನೆಲೆ ಜಿಯಾ ವಿರುದ್ಧ ಗೃಹ ಸಚಿವಾಲಯ ದೇಶದ್ರೋಹ ಪ್ರಕರಣ ದಾಖಲಿಸಲು ಅನುಮತಿ ನೀಡಿತ್ತು.
ಢಾಕಾದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎದುರು ಬೆಳಿಗ್ಗೆ ಜಿಯಾ ವಿರುದ್ಧ ಈ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸುವಂತೆ ಮನವಿ ಮಾಡಲಾಗಿದೆ’ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಬಾಂಗ್ಲಾದೇಶ ದಂಡ ಸಂಹಿತೆಯ 123 (ಎ) ಕಲಂ ಅಡಿಯಲ್ಲಿ ಜಿಯಾ ಅವರ ವಿರುದ್ಧ ದೇಶದ್ರೋಹ ಪ್ರಕರಣದ ದಾಖಲಿಸಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ವಕೀಲರಾದ ಮಮ್ತಾಜ್ ಉದ್ದೀನ್ ಅಹ್ಮದ್ ಮೆಹೆದಿ ಅವರು ಡಿಸೆಂಬರ್ 27ರಂದು ಕೋರಿದ್ದರು.
Advertisement