ದ್ವೇಷ ಬಿಡಿ ಎಂಬ ಬ್ಯಾನರ್ ತೋರಿಸಿದ್ದಕ್ಕೆ ಹೊರದಬ್ಬಿದರು!

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಪ್ರಚಾರ ಸಭೆಯಿಂದ ಭಾರತೀಯ ಮೂಲದ ಸಿಖ್ ವ್ಯಕ್ತಿಯೊಬ್ಬರನ್ನು...
ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ  ಪ್ರಚಾರ ಸಭೆಯಿಂದ ಭಾರತೀಯ ಮೂಲದ ಸಿಖ್ ವ್ಯಕ್ತಿಯೊಬ್ಬರನ್ನು ಹೊರ ತಳ್ಳುತ್ತಿರುವುದು.
ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಪ್ರಚಾರ ಸಭೆಯಿಂದ ಭಾರತೀಯ ಮೂಲದ ಸಿಖ್ ವ್ಯಕ್ತಿಯೊಬ್ಬರನ್ನು ಹೊರ ತಳ್ಳುತ್ತಿರುವುದು.
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ  ಪ್ರಚಾರ ಸಭೆಯಿಂದ ಭಾರತೀಯ ಮೂಲದ ಸಿಖ್ ವ್ಯಕ್ತಿಯೊಬ್ಬರನ್ನು ಬಲವಂತವಾಗಿ ಹೊರ ಹಾಕಿದ ಘಟನೆ ನಡೆದಿದೆ.
ಲೊವಾದಲ್ಲಿ ಟ್ರಂಪ್ ಭಾನುವಾರ ಎಂದಿನ  ತಮ್ಮ ಮುಸ್ಲಿಂ ವಿರೋಧಿ ಭಾಷಣ ಮುಂದುವರಿಸಿದ್ದಾಗ, ಕೆಂಪು ಪೇಟ ಧರಿಸಿದ್ದ ಸಿಖ್ ವ್ಯಕ್ತಿ  ದ್ವೇಷ ಬಿಡಿ ಎಂಬ ಘೋಷಣೆ ಬರೆದ  ಬ್ಯಾನರ್ ಹಿಡಿದು ನಿಂತರು. ಕೂಡಲೇ ಭದ್ರತಾ ಪಡೆಗಳು ಆತನನ್ನು ಸಭೆಯಿಂದ ಹೊರಗೆ ಕಳಿಸಿದರು.
ಸಿಖ್ ವ್ಯಕ್ತಿ ಪ್ರತಿಭಟನೆ ವ್ಯಕ್ತ ಪಡಿಸಿದಾಗ, ಟ್ರಂಪ್ ಅಮೆರಿಕದ 9/11 ದಾಳಿಯನ್ನು ಪ್ರಸ್ತಾಪಿಸಿ, ನಮ್ಮ ನೆಲದಲ್ಲಿ  ಮುಸ್ಲಿಂ ಉಗ್ರವಾದ ಎಲ್ಲೆಡೆ  ಹರಡಿದೆ. ಆದರೆ, ನಮ್ಮ ಅಧ್ಯಕ್ಷರು ಆ ಬಗ್ಗೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದರು. ತಮ್ಮ  ಮಾತಿನ ನಡುವೆ ಸಿಖ್ ವ್ಯಕ್ತಿ ಬ್ಯಾನರ್ ಪ್ರದರ್ಶಿಸುತ್ತಿದ್ದಂತೆ ಬೈ ಬೈ ಗುಡ್‌ಬೈ ಎಂದು ಕೈ ಎತ್ತಿ ಸೂಚಿಸಿದ ಟ್ರಂಪ್, ಈತ ಧರಿಸಿದ್ದು ಆ ಟೊಪ್ಪಿಯಲ್ಲ ತಾನೆ? ಆತ ಅದನ್ನು ತೊಡುವುದಿಲ್ಲ ಎಂದು ಕೊಳ್ಳುತ್ತೇನೆ. ಇದಕ್ಕೆಲ್ಲಾ ನಾವು ಏನಾದರೂ ಮಾಡಬೇಕಿದೆ. ಏಕೆಂದರೆ, ಇದು ನಮಗೆ ಸರಿ ಕಾಣುತ್ತಿಲ್ಲ  ಎಂದು ಜನರನ್ನುದ್ದೇಶಿಸಿ ಹೇಳಿದರು. ಜನತೆ ಅವರ ಮಾತುಗಳಿಗೆ ಯುಎಸ್‌ಎ, ಯುಎಸ್‌ಎ ಎಂದು ಘೋಷಣೆ  ಕೂಗುವ ಮೂಲಕ ಬೆಂಬಲ ಸೂಚಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com