ಶರಿಯಾ ಕಾನೂನು ಪರಿಶೀಲನೆಗೆ ಬ್ರಿಟನ್ ಆದೇಶ

ಶರಿಯಾ ಕಾನೂನು, ಇಂಗ್ಲೆಂಡ್ ಮತ್ತು ವೇಲ್ಸ್ ಕಾನೂನಿಗೆ ಪೂರಕವಾಗಿದೆಯೇ ಎಂದು ಪರಿಶೀಲಿಸುವುದಕ್ಕೆ ಬ್ರಿಟಿಶ್ ಸರ್ಕಾರ ಸಮಿತಿಯೊಂದನ್ನು ರಚಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಂಡನ್: ಶರಿಯಾ ಕಾನೂನು, ಇಂಗ್ಲೆಂಡ್ ಮತ್ತು ವೇಲ್ಸ್ ಕಾನೂನಿಗೆ ಪೂರಕವಾಗಿದೆಯೇ ಎಂದು ಪರಿಶೀಲಿಸುವುದಕ್ಕೆ ಬ್ರಿಟಿಶ್ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. 
ದೇಶದಲ್ಲಿ ಧರ್ಮದ ಹೆಸರಿನಲ್ಲಿ ಶರಿಯಾ ಕಾನೂನು ದುರ್ಬಳಕೆಯಾಗುತ್ತಿದೆಯೇ ಎಂದು ಪತ್ತೆ ಹಚ್ಚಲು, ಈ ಕಾನೂನಿಗೆ ಒಳಪಟ್ಟವರನ್ನು ಪ್ರಶ್ನಿಸಲು ಈ ಸಮಿತಿಯ ತಜ್ಞರಿಗೆ ಅಧಿಕಾರ ನೀಡಲಾಗಿದೆ. 
ಒಮ್ಮತದ ಮೌಲ್ಯಗಳನ್ನು ಕಡೆಗಣಿಸಿ, ಸಾಮಾಜಿಕ ಹಾನಿ ತರಲು ಕೆಲವು ಸಮುದಾಯಯಗಳ ವಿರುದ್ಧ ಶರಿಯಾ ಕಾನೂನು ದುರ್ಬಳಕೆಯಾಗುತ್ತಿದೆಯೇ ಎಂಬುದನ್ನು ಕೂಡ ಈ ಸಮಿತಿ ಪರಿಶೀಲಿಸಲಿದೆ. 
"ದೇಶದ ಉದ್ದಗಲಕ್ಕೆ ಹೆಚ್ಚೆಚ್ಚು ಜನರ ಅನುಭವ ಮತ್ತು ನಿಲುವುಗಳನ್ನು ತಿಳಿದಿಕೊಳ್ಳುವುದು ಈ ಸಮಿತಿಯ ಆದ್ಯತೆ. ಆದುದರಿಂದ ಶರಿಯಾ ಕಾನೂನನ್ನು ಬಳಸಿರುವ ಶರಿಯಾ ಸಮಿತಿಗಳಲ್ಲಿ ಇರುವ ಯಾರಾದರೂ ತಮ್ಮ ಅನುಭಗಳನ್ನು ಹಂಚಿಕೊಳ್ಳಲು ಮುಂದೆ ಬರಬೇಕು ಎಂದು ಮನವಿ ಮಾಡುತ್ತಿದ್ದೇನೆ" ಎಂದು ಈ ಪರಿಶೀಲನಾ ಸಮಿತಿಯ ಅಧ್ಯಕ್ಷ ಮೋನಾ ಸಿದ್ದಿಕಿ ಹೇಳಿದ್ದಾರೆ. 
ಸಿದ್ಧಿಕಿ ಇಸ್ಲಾಮ್ ಮತ್ತು ಅಂತರ ಧರ್ಮೀಯ ಪಠ್ಯಗಳ ಮೇಲೆ ತಜ್ಞರು. 
ಸರ್ಕಾರದ ಭಯೋತ್ಪಾದಕಾ ವಿರೋಧಿ ನಡೆಯ ಭಾಗವಾಗಿ ಈ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ. ಹೊರಹೋಗುತ್ತಿರುವ ಪ್ರಧಾನಿ ಡೇವಿಡ್ ಕ್ಯಾಮರಾನ್ ಅವರನ್ನು ಬದಲಿಸಲಿದ್ದಾರೆ ಎನ್ನಲಾಗಿರುವ ಗೃಹ ಕಾರ್ಯದರ್ಶಿ ಥೇರಸ ಮೇ ಇದಕ್ಕೂ ಮುಂಚೆ ಈ ಸಮಿತಿ ರಚಿಸಲಾಗುತ್ತದೆ ಎಂದಿದ್ದರು. 2017 ರೇ ವೇಳೆಗೆ ಈ ಸಮಿತಿ ತನ್ನ ಶಿಪಾರಸ್ಸು ನೀಡಲಿದೆ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com