ಢಾಕಾ ಉಗ್ರ ದಾಳಿ: ಇಬ್ಬರ ಬಂಧನ

22 ವಿದೇಶಿಯರನ್ನು ಬಲಿ ಪಡೆದ ಢಾಕಾ ಉಗ್ರ ದಾಳಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಬಾಂಗ್ಲಾದೇಶದ ಪೊಲೀಸರು, ದಾಳಿ ಸಂಬಂಧ ಸೋಮವಾರ...
ಉಗ್ರರ ವಿರುದ್ಧ ಕಾರ್ಯಾಚರೆ ನಡೆಸುತ್ತಿರುವ ಭದ್ರತಾ ಸಿಬ್ಬಂದಿ(ಸಂಗ್ರಹ ಚಿತ್ರ)
ಉಗ್ರರ ವಿರುದ್ಧ ಕಾರ್ಯಾಚರೆ ನಡೆಸುತ್ತಿರುವ ಭದ್ರತಾ ಸಿಬ್ಬಂದಿ(ಸಂಗ್ರಹ ಚಿತ್ರ)
ಢಾಕಾ: 22 ವಿದೇಶಿಯರನ್ನು ಬಲಿ ಪಡೆದ ಢಾಕಾ ಉಗ್ರ ದಾಳಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಬಾಂಗ್ಲಾದೇಶದ ಪೊಲೀಸರು, ದಾಳಿ ಸಂಬಂಧ ಸೋಮವಾರ ಇಬ್ಬರನ್ನು ಬಂಧಿಸಿದ್ದಾರೆ.
ಢಾಕಾದ ಕೇಫೆ ಮೇಲಿನ ಉಗ್ರ ದಾಳಿಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಸದ್ಯ ಆ ಇಬ್ಬರೂ ದೈಹಿಕವಾಗಿ ಬಳಲಿದ್ದು, ಚೇತರಿಸಿಕೊಂಡ ನಂತರ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಮಾಹಾ ನಿರ್ದೇಶಕ ಎಕೆಎಂ ಶಹಿದುಲ್ ಹಖ್ ಅವರು ತಿಳಿಸಿದ್ದಾರೆ. ಆದರೆ ಬಂಧಿತರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.
ಬಂಧಿತರ ಪೈಕಿ ಓರ್ವ ಆಸ್ಪತ್ರೆಯಲ್ಲಿದ್ದು, ಮತ್ತೊರ್ವ ಪೊಲೀಸ್ ವಶದಲ್ಲಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ ಉಗ್ರರು ಅಂತರಾಷ್ಟ್ರೀಯ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಈ ಮುಂಚೆ ಕೇಫೆ ಮೇಲೆ ದಾಳಿ ನಡೆಸಿದ ಏಳು ಉಗ್ರರ ಪೈಕಿ ಓರ್ವನನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ ಎಂದು ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸಿನಾ ಮತ್ತು ಬಾಂಗ್ಲಾ ಸೇನೆ ತಿಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com