ಎಡಗಾಲಿನ ಮೇಲೆ ಬುದ್ಧ ಟ್ಯಾಟೂ; ಸ್ಪಾನಿಷ್ ಪ್ರವಾಸಿಗನನ್ನು ಹೊರಕಳಿಸಿದ ಮಯನ್ಮಾರ್

ಬೌದ್ಧ ಧರ್ಮ ಪ್ರಧಾನವಾಗಿರುವ ಮಯನ್ಮಾರ್ ಗೆ ಪ್ರವಾಸಕ್ಕೆ ಬಂದಿದ್ದ ಸ್ಪೇನ್ ನಾಗರಿಕ ಎಡಗಾಲಿನ ಮೇಲೆ ಬುದ್ಧನ ಅಚ್ಚೆ ಹಾಕಿಸಿಕೊಂಡಿದ್ದರಿಂದ, ಅದು ಮನನೋಯಿಸುವ ನಡೆಯೆಂದು ಬಗೆದು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನಾಯ್ ಪಿಐ ತಾವ್: ಬೌದ್ಧ ಧರ್ಮ ಪ್ರಧಾನವಾಗಿರುವ ಮಯನ್ಮಾರ್ ಗೆ ಪ್ರವಾಸಕ್ಕೆ ಬಂದಿದ್ದ ಸ್ಪೇನ್ ನಾಗರಿಕ ಎಡಗಾಲಿನ ಮೇಲೆ ಬುದ್ಧನ ಅಚ್ಚೆ ಹಾಕಿಸಿಕೊಂಡಿದ್ದರಿಂದ, ಅದು ಮನನೋಯಿಸುವ ನಡೆಯೆಂದು ಬಗೆದು ದೇಶದಿಂದ ಹೊರಕಳಿಸಿರುವ ಘಟನೆ ನಡೆದಿದೆ ಎಂದು ರಾಜತಾಂತ್ರಿಕ ಮೂಲಗಳಿಂದ ತಿಳಿದು ಮಾಧ್ಯಮವೊಂದು ಮಂಗಳವಾರ ವರದಿ ಮಾಡಿದೆ. 
ಪ್ರಮುಖ ಪ್ರವಾಸಿ ಕೇಂದ್ರ ಮತ್ತು ಸಾವಿರಾರು ಬೌದ್ಧ ದೇವಾಲಯಗಳಲಿರುವ ಬಾಗನ್ ನಗರದಲ್ಲಿ ಸ್ಪಾನಿಷ್ ನಾಗರಿಕನನ್ನು ವಶಕ್ಕೆ ಪಡೆಯಲಾಗಿದೆ. ಬೌದ್ಧ ಗುರುಗಳು ಈ ಪ್ರವಾಸಿಗನ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. 
ನಂತರ ಈ ಯುವಕ ಮತ್ತು ಅವನ ಜೋಡಿಯನ್ನು ಚಿಯಾಂಗ್ ಮಯ್ ನ ಥಾಯ್ ನಗರಕ್ಕೆ ಗಡಿಪಾರು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಮೈಮೇಲೆ ಬುದ್ಧನ ಟ್ಯಾಟೂ ಹಾಕಿಕೊಳ್ಳುವುದು ಮಯನ್ಮಾರ್ ನಲ್ಲಿ ನಿಷಿದ್ಧ ಎಂದು ಸ್ಪೇನ್ ನ ವಿದೇಶಾಂಗ ಇಲಾಖೆ ತನ್ನ ತಂತರ್ಜಾಲ ತಾಣದಲ್ಲಿ ವಿಶೇಷವಾಗಿ ಪ್ರಕಟಿಸಿದೆ. ಒಂದು ಪಕ್ಷ ಟ್ಯಾಟೂ ಹೊಂದಿದ್ದರೆ, ವಿಶೇಷವಾಗಿ ಕಾಲುಗಳ ಮೇಲೆ ಹೊಂದಿದ್ದರೆ ಅದನ್ನು ಸದಾ ಮುಚ್ಚಿಕೊಳ್ಳುವಂತೆ ಕೂಡ ಸೂಚಿಸಿದೆ. 
ದೀರ್ಘ ಕಾಲದ ಮಿಲಿಟರಿ ಆಡಳಿತದಿಂದ ವಿಶ್ವದಿಂದ ಪ್ರತ್ಯೇಕವಾಗಿರುವಂತೆ ಉಳಿದಿದ್ದ ಮಯನ್ಮಾರ್ 2011 ರಿಂದ ಪ್ರವಾಸಿಗರಿಗೆ ತೆರೆದುಕೊಂಡಿತ್ತು. 
ಮಾರ್ಚ್ 2015 ರಲ್ಲಿ ನ್ಯೂ ಜೀಲ್ಯಾಂಡ್ ನ ಫಿಲ್ ಬ್ಲ್ಯಾಕ್ ವುಡ್ ಎಂಬುವವರು ಹೋಟೆಲ್ ಪ್ರಚಾರಕ್ಕಾಗಿ ಬುದ್ಧನ ಚಿತ್ರ ಬಳಸಿದ್ದಕ್ಕೆ ದೇಶದ ನ್ಯಾಯಾಲಯ ಅವರಿಗೆ ಎರಡು ವರೆ ವರ್ಷದ ಜೈಲು ಶಿಕ್ಷೆ ನೀಡಿತ್ತು. 
ಮಯ್ನಮಾರ್ ನ 95% ಜನ ಬೌದ್ಧ ಧರ್ಮಕ್ಕೆ ಸೇರಿದವರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com