
ಢಾಕಾ: ಢಾಕಾ ಕೆಫೆ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಪಶ್ಚಿಮ ಬಂಗಾಳದಲ್ಲಿ ಅಡಗಿದ್ದಾನೆ ಎಂದು ದಾಳಿಯ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಹೇಳಿದ್ದಾರೆ.
ಬಾಂಗ್ಲಾದೇಶ ಢಾಕಾ ಮೇಲಿನ ಉಗ್ರ ದಾಳಿಯ ರೂಪರೇಷೆ ರಚಿಸಿದ್ದ ಮಾಸ್ಟರ್ ಮೈಂಡ್ ಏಳು ತಿಂಗಳ ಹಿಂದೆಯೇ ಢಾಕಾ ತೊರೆದಿದ್ದು, ಭಾರತದ ಪಶ್ಚಿಮ ಬಂಗಾಳದಲ್ಲಿ ಅಡಗಿಕೊಂಡಿದ್ದಾನೆ. ಜಮಾತುಲ್ ಮುಜಾಹಿದೀನ್ ಬಾಂಗ್ಲಾದೇಶ(ಜೆಎಂಬಿ), ಹಿಜ್ಬ್ ಉಲ್ ತಹರೀರ್ ಮತ್ತು ಅನ್ಸರುಲ್ಲಾ ಬಾಂಗ್ಲಾ ನಿಷೇಧಿತ ಉಗ್ರ ಸಂಘಟನೆಗಳು ಜತೆಗೂಡಿ ದಾಳಿ ನಡೆಸಿರುವುದಾಗಿ ತನಿಖಾಧಿಕಾರಿಗಳು ಹೇಳಿರುವುದಾಗಿ ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ಢಾಕಾ ಕೆಫೆ ದಾಳಿಯಲ್ಲಿ ಭಾರತೀಯ ಯುವತಿ ಸೇರಿ ಒಟ್ಟು 22 ಮಂದಿಯ ಹತ್ಯೆ ಮಾಡಲಾಗಿತ್ತು. ಇದು ತಮ್ಮ ಕೃತ್ಯ ಎಂದು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೇಳಿಕೊಂಡಿತ್ತು. ಅಲ್ಲದೆ ಇಂತಹ ಭೀಕರ ದಾಳಿಗಳನ್ನು ಭವಿಷ್ಯದಲ್ಲಿ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು.
ಸದ್ಯ ತನಿಖಾ ತಂಡ ಢಾಕಾ ಕೆಫೆ ದಾಳಿಯ ಮಾಸ್ಟರ್ ಮೈಂಡ್ ಉಗ್ರನ ಬೆನ್ನು ಹತ್ತಿದ್ದು, ಉಗ್ರನ ಹೆಸರು, ಗುರುತನ್ನು ಬಹಿರಂಗಪಡಿಸುತ್ತಿಲ್ಲ.
Advertisement