ವಿಡಿಯೋ ಗೇಮ್ ನಲ್ಲಿ ಹಿಂದೂಗಳ ಆರಾಧ್ಯ ಕಾಳಿ ದೇವಿ ಪ್ರತಿರೂಪಕ್ಕೆ ಆಕ್ಷೇಪ

ಹಿಂದೂಗಳ ಆರಾಧ್ಯ ಕಾಳಿ ದೇವಿಯ ಪ್ರತಿರೂಪದ ಪಾತ್ರವನ್ನು ಓವರ್ ವಾಚ್ ವಿಡಿಯೋ ಗೇಮ್ ನಲ್ಲಿ ರೂಪಿಸಿರುವುದಕ್ಕೆ ಅಮೆರಿಕದ ಕಂಪನಿ ಬ್ಲಿಜಾರ್ಡ್ ವಿರುದ್ಧ...
ದೇವಿ ಪ್ರತಿರೂಪ
ದೇವಿ ಪ್ರತಿರೂಪ

ನ್ಯೂಯಾರ್ಕ್: ಹಿಂದೂಗಳ ಆರಾಧ್ಯ ಕಾಳಿ ದೇವಿಯ ಪ್ರತಿರೂಪದ ಪಾತ್ರವನ್ನು ಓವರ್ ವಾಚ್ ವಿಡಿಯೋ ಗೇಮ್ ನಲ್ಲಿ ರೂಪಿಸಿರುವುದಕ್ಕೆ ಅಮೆರಿಕದ ಕಂಪನಿ ಬ್ಲಿಜಾರ್ಡ್ ವಿರುದ್ಧ ಆಕ್ಷೇಪ ವ್ಯಕ್ತವಾಗಿದೆ.

ವಿಡಿಯೋ ಗೇಮ್ ನಲ್ಲಿ ಕಾಳಿ ದೇವಿಯ ಪ್ರತಿರೂಪದ ಪಾತ್ರ ರೂಪಿಸಿರುವುದಕ್ಕೆ ಯುನಿವರ್ಸಲ್ ಸೊಸೈಟ್ ಆಫ್ ಹಿಂದುಯಿಸಂ ಮುಖ್ಯಸ್ಥ ರಾಜನ್ ಝೆದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ವಿಡಿಯೋ ಗೇಮ್ ನಲ್ಲಿ ದೇವಿ ಪಾತ್ರಕ್ಕೆ ನೀಲಿ ಬಣ್ಣ ನೀಡಲಾಗಿದ್ದು, ಇದು ನಿಜವಾದ ದೇವಿಯ ಗುಣ ವಿಶೇಷಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಗೇಮ್ ನಲ್ಲಿ ಆಟಗಾರರು ದೇವಿಯ ಚಲನೆಯನ್ನು ನಿರ್ಧರಿಸುತ್ತಾರೆ. ಆದರೆ ವಾಸ್ತವದಲ್ಲಿ ಜನರ ನಡೆಯನ್ನು ದೇವಿ ನಿರ್ಧರಿಸುತ್ತಾಳೆ ಎಂಬ ಅಂಶವನ್ನು ಪ್ರಸ್ತಾಪಿಸಿದ್ದಾರೆ. ಇನ್ನು ಮೌಸ್ ಅಥವಾ ಕೈ ಬೆರಳ ತುದಿಯಲ್ಲಿ ಆಡಿಸುವುದಕಷ್ಟೇ ದೇವಿ ಸೀಮಿತವಾಗಿಲ್ಲ ಎಂದು ರಾಜನ್ ಆಕ್ಷೇಪಿಸಿದ್ದಾರೆ.

ಹೈ ರೆಜ್ ಸ್ಟೂಡಿಯೋಸ್ ನಿರ್ಮಿಸಿದ್ದ ಸ್ಮೈಟ್ ಎಂಬ ವಿಡಿಯೋ ಗೇಮ್ ನಲ್ಲೂ ಕಾಳಿ ದೇವಿಯ ಪಾತ್ರವನ್ನು ರೂಪಿಸಿದ್ದಕ್ಕೆ ರಾಜನ್ ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ವಿಡಿಯೋ ಗೇಮ್ ನಿಂದ ಕಾಳಿ ಪಾತ್ರವನ್ನು ತೆಗೆದು ಹಾಕಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com