ಇಬ್ಬರು ಮೆಕ್ಸಿಕನ್ ಅಪಹರಣಕಾರರಿಗೆ ಬರೋಬ್ಬರಿ 520 ವರ್ಷ ಜೈಲು ಶಿಕ್ಷೆ!

ಕ್ಸಿಕೋದಲ್ಲಿ ನಡೆದಿದ್ದ ಆಘಾತಕಾರಿ ಕಿಡ್ನಾಪ್ ಮತ್ತು ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳಿಗೆ 520 ವರ್ಷ ಜೈಲು ಶಿಕ್ಷೆ ನೀಡಲಾಗಿದೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೆಕ್ಸಿಕೋ: ಮೆಕ್ಸಿಕೋದಲ್ಲಿ ನಡೆದಿದ್ದ ಆಘಾತಕಾರಿ ಕಿಡ್ನಾಪ್ ಮತ್ತು ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳಿಗೆ 520 ವರ್ಷ ಜೈಲು ಶಿಕ್ಷೆ ನೀಡಲಾಗಿದೆ ಎಂದು ವರದಿಯಾಗಿದೆ. ಮಾರಿಯೋ ಅಲ್ಬರ್ಟೋ ಮತ್ತು ಗ್ಯಾಬೆರಿಲ್ ಕರಾಸ್ಕೋ ಈ ಶಿಕ್ಷೆಗೆ ಗುರಿಯಾಗಿದ್ದು, ಜೊತೆಗೆ 270,000ಡಾಲರ್ ದಂಡ ತೆರಬೇಕಿದೆ.

ಮೇ 2013 ರಂದು ಮೆಕ್ಸಿಕೋ ಸಿಟಿಯ ಪ್ರವಾಸಿ ಸ್ಥಳದ ಬಾರ್ ವೊಂದರಿಂದ 13 ಮಂದಿಯನ್ನು ಅಪಹರಣ ಮಾಡಲಾಗಿತ್ತು. ಒಂದು ವೇಳೆ ಈ ಇಬ್ಬರು ಅಪರಾಧಿಗಳು ದಂಡ ಕಟ್ಟಲು ವಿಫಲವಾದರೇ 39,000 ದಿನ ಸಮುದಾಯದ ಸೇವೆ ಮಾಡಬೇಕೆಂದು ನ್ಯಾಯಾಲಸಯ ಅದೇಶಿಸಿರುವುದಾಗಿ ವರದಿ ತಿಳಿಸಿದೆ.

ಹೆವೆನ್ ಎಂಬ ಬಾರ್ ನಿಂದ ಯುವಕರನ್ನು ಅಪಹರಿಸಿ ಕೊಂದಿದ್ದರು. ಡ್ರಗ್ ಡೀಲರ್ ಒಬ್ಬನ ಕೊಲೆಗೆ ಸಂಬಂಧಿಸಿದಂತೆ ಯುವಕರನ್ನು ಅಪಹರಿಸಿ ಸಾಮೂಹಿಕವಾಗಿ ಕೊಲ್ಲಲಾಗಿತ್ತು. ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಹೆವೆನ್ ಬಾರ್ ನ ಮಾಲೀಕರಿಗೆ 500 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com