ಪೋಲಿಯೋ ಲಸಿಕೆ ಬಗ್ಗೆ ತಪ್ಪು ಕಲ್ಪನೆ; ಬಿಗಿ ಭದ್ರತೆಯ ನಡುವೆ ಕರಾಚಿಯಲ್ಲಿ ಮಕ್ಕಳಿಗೆ ಲಸಿಕೆ

ಶಸ್ತ್ರಾಸ್ತ್ರ ಸಹಿತ ಪೋಲೀಸರ ಬಿಗಿ ಭದ್ರತೆಯ ನಡುವೆ ಪಾಕಿಸ್ತಾನದ ಅತಿ ಹೆಚ್ಚು ಜನನಿಬಿಡ ನಗರ ಕರಾಚಿಯಲ್ಲಿ ಮೂರು ದಿನಗಳ ಪೋಲಿಯೋ ಲಸಿಕೆ ಅಭಿಯಾನವನ್ನು ಮಂಗಳವಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕರಾಚಿ: ಶಸ್ತ್ರಾಸ್ತ್ರ ಸಹಿತ ಪೋಲೀಸರ ಬಿಗಿ ಭದ್ರತೆಯ ನಡುವೆ ಪಾಕಿಸ್ತಾನದ ಅತಿ ಹೆಚ್ಚು ಜನನಿಬಿಡ ನಗರ ಕರಾಚಿಯಲ್ಲಿ ಮೂರು ದಿನಗಳ ಪೋಲಿಯೋ ಲಸಿಕೆ ಅಭಿಯಾನವನ್ನು ಮಂಗಳವಾರ ಆರೋಗ್ಯ ಕಾರ್ಯಕರ್ತರು ಪ್ರಾರಂಭಿಸಿದ್ದಾರೆ.  
ಪೋಲಿಯೋ ಲಸಿಕೆ ಹಾಕಲು ಈ ಆರೋಗ್ಯ ಕಾರ್ಯಕರ್ತರು ಮನೆಯಿಂದ ಮನೆಗೆ ತೆರಳಿ ಐದು ವರ್ಷದ ಕೆಳಗಿನ ಮಕ್ಕಳಿಗೆ ಲಸಿಕೆ ಹಾಕಿದರು ಎಂದು ಇ ಎಫ್ ಇ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. 
ಪಾಕಿಸ್ತಾನದಲ್ಲಿ ಪೋಲಿಯೋ ಲಸಿಕೆ ಹಾಕುವ ಆರೋಗ್ಯ ಕಾರ್ಯಕರ್ತರ ಮೇಲೆ ಈ ಹಿಂದೆ ಇಸ್ಲಾಮಿಕ್ ಭಯೋತ್ಪಾದಕರು ದಾಳಿ ಮಾಡಿದ ಹಿನ್ನಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿತ್ತು. ಕ್ವೆಟ್ಲಾ ನಗರದಲ್ಲಿ ಜನವರಿಯಲ್ಲಿ ಪೋಲಿಯೋ ಕೇಂದ್ರ ಮೇಲೆ ನಡೆದ ದಾಳಿಯಲ್ಲಿ 14 ಜನರು ಹತ್ಯೆಯಾಗಿದ್ದರು. 
ಕೆಲವು ಇಸಲಾಮಿಕ್ ಧರ್ಮ ಗುರುಗಳು ಹಾಗು ತಾಲಿಬಾನ್ ಸದಸ್ಯರು, ಅಮೆರಿಕಾದಲ್ಲಿ ತಯಾರಾಗುವ ಪೋಲಿಯೋ ಲಸಿಕೆ ಮುಸ್ಲಿಂ ಜನಸಂಖ್ಯೆಯನ್ನು ನಿಯಂತ್ರಿಸಲು ಪಾಕಿಸ್ತಾನಿಯರ ಸಂತಾನೋತ್ಪತ್ತಿಯನ್ನು ನಿಗ್ರಹಿಸಲು ಉತ್ಪಾದಿಸಲಾಗುತ್ತಿದೆ ಎಂದೇ ನಂಬಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com