
ಹೆರತ್: ಅಫ್ಘಾನಿಸ್ತಾನದ ಅಭಿವೃದ್ಧಿ ಪ್ರತಿಯೊಬ್ಬ ಭಾರತಿಯನ ಆಶಯವಾಗಿದೆ ಎಂದು ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಭಾರತ ನಿರ್ಮಾಣ ಮಾಡಿರುವ ಸಲ್ಮಾ ಅಣೆಕಟ್ಟನ್ನು ಅಲ್ಲಿನ ಅಧ್ಯಕ್ಷ ಅಶ್ರಫ್ ಘನಿ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಫ್ಘಾನಿಸ್ತಾನ ಅಭಿವೃದ್ಧಿಯಾಗಬೇಕೆಂಬುದು ಭಾರತೀಯರ ದೀರ್ಘಕಾಲಿಕ ಆಶಯವಾಗಿದೆ ಎಂದು ಮೋದಿ ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ಅಫ್ಘಾನಿಸ್ತಾನದಲ್ಲಿ ಆಳವಾಗಿ ಬೇರೂರಬೇಕು ಹಾಗೂ ಇಲ್ಲಿನ ಆರ್ಥಿಕತೆ ಸದೃಢವಾಗುವುದನ್ನು ಭಾರತ ಎದುರು ನೋಡುತ್ತಿದೆ, ಇಲ್ಲಿಗೆ ಭೇಟಿ ನೀಡಿರುವುದು ಕೇವಲ ಸಲ್ಮಾ ಅಣೆಕಟ್ಟು ಉದ್ಘಾಟನೆಗೆ ಮಾತ್ರವಲ್ಲ, ಅಫ್ಘಾನಿಸ್ತಾನದ ಭವಿಷ್ಯದ ಪುನರ್ ನಿರ್ಮಾಣದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಾಗಿ ಮೋದಿ ತಿಳಿಸಿದ್ದಾರೆ. 1,700ಕೋಟಿ ರೂ ವೆಚ್ಚದಲ್ಲಿ ಸಲ್ಮಾ ಅಣೆಕಟ್ಟನ್ನು ನಿರ್ಮಿಸಲಾಗಿದ್ದು ಹೆರಾತ್ ನಲ್ಲಿ ಭೂಮಿಯನ್ನು ಫಲವತ್ತಾಗಿಸುವುದಕ್ಕೆ ಈ ಅಣೆಕಟ್ಟು ನೆರವಾಗಲಿದೆ.
Advertisement