ಮಾಲ್ದೀವ್ಸ್ ಅಧ್ಯಕ್ಷರ ಹತ್ಯೆಗೆ ಸಂಚು: ಮಾಜಿ ಉಪಾಧ್ಯಕ್ಷ ಅದೀಬ್​ಗೆ 15 ವರ್ಷ ಜೈಲು

ಮಾಲ್ದೀವ್ಸ್​ನ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ಮಾಜಿ...
ಅಹಮದ್ ಅದೀಬ್
ಅಹಮದ್ ಅದೀಬ್
ಮಾಲೆ: ಮಾಲ್ದೀವ್ಸ್​ನ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಅಹಮದ್ ಅದೀಬ್​ಗೆ ಕೋರ್ಟ್ 15 ವರ್ಷ ಜೈಲುಶಿಕ್ಷೆ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅದೀಬ್ ಅವರ ಇಬ್ಬರು ಅಂಗರಕ್ಷಕರಿಗೂ ಸಹ ಕೋರ್ಟ್ ತಲಾ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಅಬ್ದುಲ್ಲಾ ಯಮೀನ್ ತೆರಳುತ್ತಿದ್ದ ದೋಣಿಯಲ್ಲಿ ಬಾಂಬ್ ಇಡಲಾಗಿತ್ತು. ಬಾಂಬ್ ಸ್ಪೋಟದಲ್ಲಿ ಅದೃಷ್ಟವಶಾತ್ ಅಬ್ದುಲ್ಲಾ ಅಪಾಯದಿಂದ ಪಾರಾಗಿದ್ದರು. ಆದರೆ ಅವರ ಪತ್ನಿಗೆ ಗಾಯವಾಗಿತ್ತು. ಈ ಪ್ರಕರಣದ ತನಿಖೆಯನ್ನು ಎಫ್​ಬಿಐಗೆ ವಹಿಸಲಾಗಿತ್ತು.
ಅದೀಬ್​ಗೆ ಶಿಕ್ಷೆಯಾಗುವ ಮೂಲಕ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರಿಗೆ ವಿರೋಧಿಗಳಿಲ್ಲದಂತಾಗಿದೆ. ಇದಕ್ಕೂ ಮುನ್ನ ಭಯೋತ್ಪಾದನೆಗೆ ಸಹಕಾರ ನೀಡಿದ ವಿವಾದಾತ್ಮಕ ಆರೋಪದ ಮೇಲೆ ಮಾಲ್ದೀವ್ಸ್​ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಷೀದ್ ಅವರಿಗೆ ಕಳೆದ ವರ್ಷ 17 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ನಷೀದ್ ಚಿಕಿತ್ಸೆಯ ನೆಪವೊಡ್ಡಿ ಬ್ರಿಟನ್​ಗೆ ತೆರಳಿದ್ದರು. ಬ್ರಿಟನ್ ಕಳೆದ ತಿಂಗಳು ನಷೀದ್​ಗೆ ರಾಜಕೀಯ ಆಶ್ರಯ ನೀಡಿದ್ದು, ಅವರು ಬ್ರಿಟನ್​ನಲ್ಲೇ ಉಳಿದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com