ಬಾಂಗ್ಲಾ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆ; ೯೦೦ ಜನ ವಶಕ್ಕೆ

ಬಾಂಗ್ಲಾ ದೇಶ ನಡೆಸಿದ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯ ಮೊದಲ ದಿನವಾದ ಶುಕ್ರವಾರ ಪೊಲೀಸರು ಸುಮಾರು ೯೦೦ ಜನರನ್ನು ವಶಕ್ಕೆ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಢಾಕಾ: ಬಾಂಗ್ಲಾ ದೇಶ ನಡೆಸಿದ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯ ಮೊದಲ ದಿನವಾದ ಶುಕ್ರವಾರ ಪೊಲೀಸರು ಸುಮಾರು ೯೦೦ ಜನರನ್ನು ವಶಕ್ಕೆ ಪಡೆದಿದ್ದಾರೆ.

ಒಂದು ವಾರ ನಡೆಯಲಿರುವ ಈ ಕಾರ್ಯಾಚರಣೆಯ ಮುಖ್ಯ ಧ್ಯೇಯ ಭಯೋತ್ಪಾದಕೆ ನೆಲೆಗಳ ಮೇಲೆ ದಾಳಿ ಮಾಡಿ ದೇಶದಾದ್ಯಂತ ಅವರ ಜಾಲಕ್ಕೆ ಕಡಿವಾಣ ಹಾಕುವುದು ಎಂದು ಪೊಲೀಸ್ ಇಸ್ಪೆಕ್ಟರ್ ಜನರಲ್ ಎ ಕೆ ಎಂ ಶಾಹಿದುಲ್ ಹಕ್ ಹೇಳಿದ್ದಾರೆ.

ಶುಕ್ರವಾರವಷ್ಟೇ ಢಾಕಾದಿಂದ ೨೧೬ ಕಿಮೀ ದೂರದಲ್ಲಿರುವ ಪಬ್ನಾ ಜಿಲ್ಲೆಯ ಹಿಂದು ದೇವಾಲಯದ ಸಿಬ್ಬಂದಿಯೊಬ್ಬನನ್ನು ಬರ್ಬರವಾಗಿ ಕೊಲೆಗೈಯ್ಯಲಾಗಿತ್ತು. ಈ ಕೊಲೆಗೆ ಕಾರಣ ಇನ್ನು ತಿಳಿದುಬಂದಿಲ್ಲ ಎಂದು ಜಿಲ್ಲ ಪೊಲೀಸ್ ಅಧ್ಯಕ್ಷ ಅಲಮ್ಗೀರ್ ಕಬೀರ್ ಹೇಳಿದ್ದರು.

೨೦೧೩ ರಿಂದ ಇತ್ತೀಚೆಗೆ ಇಂತಹ ಹಿಂಸೆಯ ದಾಳಿಗಳು ತೀವ್ರಗೊಂಡಿವೆ. ಹಲವಾರು ಜಾತ್ಯಾತೀತ ಬ್ಲಾಗರ್ ಗಳು, ಬರಹಗಾರರು ಮತ್ತು ಪ್ರಕಾಶಕರನ್ನು ತೀವ್ರವಾದಿಗಳು ಕೊಂದು ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com