ಒರ್ಲಾಂಡೋ ಶೂಟೌಟ್ ಪ್ರಕರಣ: ಘಟನೆಗೆ ಕ್ಷಮೆ ಕೋರಿದ ಬಂದೂಕುಧಾರಿ ತಂದೆ

ಫ್ಲೋರಿಡಾದ ಒರ್ಲೆಂಡೋದಲ್ಲಿ ಸಲಿಂಗಕಾಮಿಗಳ ನೈಟ್ ಕ್ಲಬ್ ಮೇಲೆ ಶೂಟೌಟ್ ನಡೆಸಿ 50ಕ್ಕೂ ಹೆಚ್ಚು ಜನರ ಸಾವಿಗೆ...
ಬಂದೂಕುಧಾರಿ ಉಮರ್‌ ಮತೀನ್‌(ಸಂಗ್ರಹ ಚಿತ್ರ)
ಬಂದೂಕುಧಾರಿ ಉಮರ್‌ ಮತೀನ್‌(ಸಂಗ್ರಹ ಚಿತ್ರ)

ನ್ಯೂಯಾರ್ಕ್: ಫ್ಲೋರಿಡಾದ ಒರ್ಲೆಂಡೋದಲ್ಲಿ ಸಲಿಂಗಕಾಮಿಗಳ ನೈಟ್ ಕ್ಲಬ್ ಮೇಲೆ ಶೂಟೌಟ್ ನಡೆಸಿ 50ಕ್ಕೂ ಹೆಚ್ಚು ಜನರ ಸಾವಿಗೆ ಕಾರಣನಾದ ಬಂದೂಕುಧಾರಿ ತಂದೆ ಇಡೀ ಘಟನೆ ಬಗ್ಗೆ ಕ್ಷಮೆ ಕೋರಿದ್ದಾರೆ.

''ಇಡೀ ಘಟನೆಗೆ ನಾವು ಕ್ಷಮೆ ಕೋರುತ್ತೇವೆ. ಅವನು ಈ ಕೃತ್ಯವೆಸಗುತ್ತಾನೆ ಎಂಬ ಬಗ್ಗೆ ನಮಗೆ ಅರಿವಿರಲಿಲ್ಲ. ಎಲ್ಲರಂತೆ ನಾವು ಕೂಡ ಆಘಾತಕ್ಕೊಳಗಾಗಿದ್ದೇವೆ. ಇದಕ್ಕೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಂದೂಕುಧಾರಿಯ ತಂದೆ ಸಿದ್ಧಿಕಿ ಹೇಳಿದ್ದಾರೆ ಎಂದು ನ್ಯೂಯಾರ್ಕ್ ನ ಎಂಎಸ್ಎನ್ ಬಿಸಿ ನ್ಯೂಸ್ ಉಲ್ಲೇಖಿಸಿದೆ.

ಇತ್ತೀಚೆಗೆ ಮಿಯಾಮಿಯಲ್ಲಿ ಇಬ್ಬರು ವ್ಯಕ್ತಿಗಳು ಮುತ್ತಿಕ್ಕುವುದನ್ನು ನೋಡಿ ತನ್ನ ಮಗನಿಗೆ ತುಂಬಾ ಸಿಟ್ಟು ಬಂದಿತ್ತು. ಆಗ ನಾವು ಮಿಯಾಮಿಯಲ್ಲಿದ್ದೆವು. ಜನರು ಸಂಗೀತ ನುಡಿಸುತ್ತಿದ್ದರು. ತನ್ನ ಪತ್ನಿ ಮತ್ತು ಮಕ್ಕಳ ಸಮ್ಮುಖದಲ್ಲಿ ಇಬ್ಬರು ಸಲಿಂಗಕಾಮಿಗಳು ಮುತ್ತಿಕ್ಕುವುದನ್ನು ನೋಡಿ ಆತನಿಗೆ ತುಂಬಾ ಸಿಟ್ಟು ಬಂದಿತ್ತು ಎಂದು ಸಿದ್ಧಿಕಿ ಹೇಳಿದ್ದಾರೆ.
ತುರ್ತು ಸಂಖ್ಯೆಗೆ ಕರೆ: ಬಂದೂಕುಧಾರಿ ಉಮರ್‌ ಮತೀನ್‌ ದಾಳಿಗೆ ಮುನ್ನ ತುರ್ತು ಸಂಖ್ಯೆ 911 ಗೆ ಕರೆ ಮಾಡಿ ಐಎಸ್ ಉಗ್ರ ಸಂಘಟನೆಯ ನಾಯಕ ಅಬು ಬಕ್‌ರ್‌ ಅಲ್‌ ಬಾಗ್ದಾದಿಗೆ ತಾನು ನಿಷ್ಠನಾಗಿದ್ದೇನೆ ಎಂದು ಹೇಳಿದ್ದಾನೆ.

ಈ ಕರೆಯ ವೇಳೆ ಆತ 2013ರ ಬಾಸ್ಟನ್‌  ಮ್ಯಾರಥಾನ್  ಬಾಂಬ್ ದಾಳಿ ನಡೆಸಿದ್ದ ಸರನೇವ್‌ ಸಹೋದರರ ಹೆಸರುಗಳನ್ನು ಉಲ್ಲೇಖಿಸಿದ್ದಾನೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ನ್ಯೂಯಾರ್ಕ್ ಮೂಲದ ಅಫ್ಘಾನ್ ದಂಪತಿಗಳ ಪುತ್ರನಾಗಿರುವ ಮತೀನ್ ನೈಟ್ ಕ್ಲಬ್‍ನ ಶೌಚಾಲಯದಿಂದ 911  ಸಂಖ್ಯೆಗೆ ತುರ್ತು ಕರೆ ಕರೆ ಮಾಡಿ ತನ್ನ ಪೂರ್ತಿ ಹೆಸರನ್ನು ಪೊಲೀಸರಿಗೆ ಹೇಳಿದ್ದಾನೆ ಎಂಬುದಾಗಿ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com