ಪ್ಯಾರಿಸ್ ನಲ್ಲಿ ಎರಡನೇ ವರ್ಷ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ

ಪ್ಯಾರಿಸ್ ನಲ್ಲಿ ಎರಡನೇ ವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗಿದೆ.
ಫ್ರಾನ್ಸ್ ನಲ್ಲಿ ಯೋಗ ದಿನಾಚರಣೆ (ಸಂಗ್ರಹ ಚಿತ್ರ)
ಫ್ರಾನ್ಸ್ ನಲ್ಲಿ ಯೋಗ ದಿನಾಚರಣೆ (ಸಂಗ್ರಹ ಚಿತ್ರ)

ಪ್ಯಾರಿಸ್: ಪ್ಯಾರಿಸ್ ನಲ್ಲಿ ಎರಡನೇ ವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗಿದೆ. ಪ್ಯಾರಿಸ್​ನ ಈಶಾನ್ಯ ಭಾಗದಲ್ಲಿರುವ ಅತಿ ದೊಡ್ಡ ಮೈದಾನವಾದ ಪಾರ್ಕ್ ಡೆ ಲಾ ವಿಲ್ಲೆಟ್ಟೆಯಲ್ಲಿ ಎರಡನೇ ವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಸಲಾಗಿದ್ದು 2,000 ಕ್ಕೂ ಹೆಚ್ಚು ಜನರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಫ್ರಾನ್ಸ್ ನ ಅಧಿಕೃತ ಹೇಳಿಕೆ ಮೂಲಕ ತಿಳಿದುಬಂದಿದೆ.
 
ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ, ವಿಶ್ವಸಂಸ್ಥೆ ಅಳವಡಿಸಿಕೊಂಡಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಣೆ ಮಾಡಲಾಗಿದೆ ಎಂದು ಫ್ರಾನ್ಸ್ ನ ಅಧಿಕೃತ ಪ್ರಕಟಣೆ ತಿಳಿಸಿದೆ. ಯೋಗ ದಿನಾಚರಣೆಯ ಭಾಗವಾಗಿ ಭಾರತ- ಫ್ರೆಂಚ್ ನ ಸಾಂಸ್ಕೃತಿಕ ಸಂಘಟನೆಗಳು,  ಅನಿವಾಸಿ ಭಾರತೀಯರು ಹಾಗೂ  ಯೋಗವನ್ನು ಬೋಧಿಸುವ ಶಾಲೆಗಳು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ಜೂ.21 ರಂದು ಭಾರತೀಯ ರಾಯಭಾರಿ ಕಚೇರಿ ವಿಶ್ವ ವಿಖ್ಯಾತ ಎಫಿಲ್ ಟವರ್ ಎದುರಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಜನರು ಯೋಗಾಭ್ಯಾಸ ಮಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com