
ಕಾಬುಲ್: ಆಪ್ಘಾನಿಸ್ಥಾನದ ರಾಜಧಾನಿ ಕಾಬುಲ್ ನಲ್ಲಿ ಭದ್ರಾತಾ ಪಡೆ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಮಿನಿ ಬಸ್ ಗೆ ಆತ್ಮಹತ್ಯಾ ಬಾಂಬ್ ಇರಿಸಿದ್ದ ಕಾರ್ ಢಿಕ್ಕಿ ಹೊಡೆದ ಪರಿಣಾಮ ೧೪ ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
"ಬೆಳಗ್ಗೆ ಸುಮಾರು ೬:೩೦ ಕ್ಕೆ ಬಸ್ಸು ಜನನಿಬಿಡ ಪ್ರದೇಶ ಪುಲ್-ಎ-ಚರ್ಕಿ ಬಳಿ ಚಲಿಸುತ್ತಿದ್ದಾಗ, ಸ್ಫೋಟಕಗಳನ್ನು ಹೊತ್ತಿದ್ದ ಕಾರು ಬಸ್ಸಿಗೆ ಢಿಕ್ಕಿ ಹೊಡೆದು ಭಾರಿ ಸ್ಫೋಟ ಉಂಟಾಯಿತು" ಎಂದು ಅಲ್ಲಿ ನೆರೆದಿದ್ದ ಪ್ರತ್ಯಕ್ಷದರ್ಶಿ ಫರ್ಹದ್ ಮೊಹಮ್ಮದಿ ತಿಳಿಸಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.
"ಮೃತಪಟ್ಟವರಲ್ಲಿ ಬಹುತೇಕರು ಬಸ್ಸಿನಲ್ಲಿದ್ದ ವಿದೇಶಿ ಭದ್ರತಾ ಸಿಬ್ಬಂದಿ. ಸದ್ಯಕೆ ಸಿಕ್ಕಿರುವ ಮಾಹಿತಿ ಪ್ರಕಾರ ಅವರು ನೇಪಾಳದವರು" ಎಂದು ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ದಾಳಿಯಲ್ಲಿ ೨೫ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
Advertisement