ಯೋಗ ಭಾರತದ್ದಲ್ಲ, ವಿಶ್ವಕ್ಕೆ ಸಂಬಂಧಿಸಿದ್ದು: ವಿಶ್ವಸಂಸ್ಥೆಯಲ್ಲಿ ಅಧ್ಯಾತ್ಮ ಗುರು ಜಗ್ಗಿ ವಾಸುದೇವ್ ಹೇಳಿಕೆ

ಆಧ್ಯಾತ್ಮಗುರು ಸದ್ಗುರು ಜಗ್ಗಿ ವಾಸುದೇವ್, ಯೋಗವೆಂಬುದು ಭಾರತಕ್ಕೆ ಮಾತ್ರ ಸೀಮಿತವಾದ ವಿಷಯವಲ್ಲ ಎಂದು ಹೇಳಿದ್ದಾರೆ.
ಸದ್ಗುರು ಜಗ್ಗಿ ವಾಸುದೇವ್
ಸದ್ಗುರು ಜಗ್ಗಿ ವಾಸುದೇವ್

ಯುನೈಟೆಡ್ ನೇಶನ್ಸ್: ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾರತವನ್ನು ಪ್ರತಿನಿಧಿಸಿ ಭಾಷಣ ಮಾಡಿರುವ "ಇಶಾ" ಪ್ರತಿಷ್ಠಾನದ ಸಂಸ್ಥಾಪಕ, ಆಧ್ಯಾತ್ಮಗುರು ಸದ್ಗುರು ಜಗ್ಗಿ ವಾಸುದೇವ್, ಯೋಗವೆಂಬುದು ಭಾರತಕ್ಕೆ ಮಾತ್ರ ಸೀಮಿತವಾದ ವಿಷಯವಲ್ಲ ಎಂದು ಹೇಳಿದ್ದಾರೆ.

ಯೋಗ ಭಾರತಕ್ಕೆ ಮಾತ್ರ ಸೇರಿದ್ದಲ್ಲ, ಅದು ಎಂದಿಗೂ ಭಾರತದ್ದಾಗಿರಲಿಲ್ಲ, ಸಮಸ್ತ ಮಾನವ ಜನಾಂಗದಒಳಿತಿಗಾಗಿ ಇರುವ ವಿಜ್ಞಾನ ಹಾಗೂ ತಂತ್ರಜ್ಞಾನವೇ ಯೋಗ ಎಂದು ಜಗ್ಗಿ ವಾಸುದೇವ್ ಹೇಳಿದ್ದಾರೆ. ಯೋಗ ಒಂದು ರೀತಿಯ ವಿಜ್ಞಾನವಾಗಿರುವುದರಿಂದ ಅದನ್ನು ನಿರ್ದಿಷ್ಟ ದೇಶದ ಸ್ವತ್ತು ಎಂದು ಹೇಳಲು ಸಾಧ್ಯವಿಲ್ಲ ಹಾಗಾಗಿ ಯೋಗ ಭಾರತಕ್ಕೆ ಮಾತ್ರ ಸೇರಿದ್ದಲ್ಲ ಇಡೀ ವಿಶ್ವಕ್ಕೆ ಸಂಬಂಧಿಸಿದ್ದು ಎಂದಿದ್ದಾರೆ.

ಯೋಗ ಜನ್ಮ ಪಡೆದಿದ್ದು ಭಾರತದಲ್ಲಿ ಎಂಬ ಕಾರಣಕ್ಕೆ ನಾವು ಭಾರತೀಯರು ಸಂಭ್ರಮಿಸಬಹುದೇ ಹೊರತು, ವಿಶ್ವಸಂಸ್ಥೆ ಅದನ್ನು ಅಂತಾರಾಷ್ಟ್ರೀಯ ದಿನವಾಗಿ ಘೋಷಿಸಿದ ನಂತರ ಅದು ಭಾರತದಿಂದ ವಿಶ್ವಕ್ಕೆ ದೊರೆತ ಉಡುಗೊರೆಯಾಗಲಿದೆ ಎಂದು ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಟ್ಟಿದ್ದಾರೆ. ಯೋಗ ದಿನಾಚರಣೆ ಅಂಗವಾಗಿ ವಿಶ್ವ ಸಂಸ್ಥೆ ಆಯೋಜಿಸಿದ್ದ ಕಾನ್ವಾರ್ಸೇಷನ್ ವಿದ್ ಮಾಸ್ಟರ್ಸ್( ಗುರುಗಳೊಂದಿಗೆ ಸಂವಹನ) ಕಾರ್ಯಕ್ರಮದಲ್ಲಿ ವಿವಿಧ ರಾಷ್ಟ್ರಗಳ ರಾಯಭಾರಿಗಳು, ಗಣ್ಯರು ಯೋಗದ ಕುರಿತು ತಮ್ಮ ಸ್ವ-ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಇಶಾ  ಪ್ರತಿಷ್ಠಾನದ ಸ್ಥಾಪಕ ಜಗ್ಗಿ ವಾಸುದೇವ್  ಭಾರತವನ್ನು ಪ್ರತಿನಿಧಿಸಿ ಮಾತನಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com