ಬ್ರೆಕ್ಸಿಟ್: ಬ್ರಿಟನ್ ವಿಪಕ್ಷ ನಾಯಕನ ರಾಜೀನಾಮೆ ಇಲ್ಲ

ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ರಾಜೀನಾಮೆ ನೀಡಿದ್ದರೆ, ಬ್ರಿಟನ್ ನ ಪ್ರತಿಪಕ್ಷ ನಾಯಕ ಜೆರೆಮಿ ಕಾರ್ಬಿನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ.
ಬ್ರಿಟನ್ ವಿರೋಧಪಕ್ಷ ನಾಯಕ ಜೆರೆಮಿ ಕಾರ್ಬಿನ್
ಬ್ರಿಟನ್ ವಿರೋಧಪಕ್ಷ ನಾಯಕ ಜೆರೆಮಿ ಕಾರ್ಬಿನ್

ಲಂಡನ್: ಬ್ರಿಟನ್ ಯುರೋಪ್ ಒಕ್ಕೂಟದಿಂದ ಹೊರನಡೆದೆದ ಪರಿಣಾಮ ಈಗಾಗಲೇ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ರಾಜೀನಾಮೆ ನೀಡಿದ್ದರೆ, ಬ್ರಿಟನ್ ನ ಪ್ರತಿಪಕ್ಷ ನಾಯಕ ಜೆರೆಮಿ ಕಾರ್ಬಿನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಅವರ ಆಪ್ತರು ಮಾಹಿತಿ ನೀಡಿರುವ ಬಗ್ಗೆ ಬಿಬಿಸಿ ವರದಿ ಮಾಡಿದೆ.

ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಂದಿದ್ದು, ಲೇಬರ್ ಪಕ್ಷದ ಮುಂದಿನ ಕಾರ್ಯತಂತ್ರದ ಬಗ್ಗೆ  ಬ್ರಿಟನ್ ನ ವಿರೋಧ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ ಲಂಡನ್ ನಲ್ಲಿ ಮಾತನಾಡಲಿದ್ದಾರೆ ಎಂದು ಜೆರೆಮಿ ಕಾರ್ಬಿನ್ ಅವರ ಆಪ್ತರು ತಿಳಿಸಿದ್ದಾರೆ.

ಲೇಬರ್ ಪಕ್ಷದ ಇಬ್ಬರು ಸಂಸದರು ಜೆರೆಮಿ ಕಾರ್ಬಿನ್ ಅವರ ವಿರುದ್ಧ ಲೇಬರ್ ಪಕ್ಷದ ಅಧ್ಯಕ್ಷರ ಬಳಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಯುರೋಪ್ ಒಕ್ಕೂಟ ತೊರೆಯುವ ಬಗ್ಗೆ ಜೆರೆಮಿ ಕಾರ್ಬಿನ್ ಸ್ಪಷ್ಟ ನಿಲುವನ್ನು ಪ್ರಕಟಿಸಿಲ್ಲ ಎಂದು ಆರೋಪಿಸಿದ್ದಾರೆ. ಇಬ್ಬರು ಸಂಸದರು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಸಾಂವಿಧಾನಿಕವಾಗಿ ಯಾವುದೇ ಮಹತ್ವ ಇಲ್ಲವಾದರೂ, ಪಕ್ಷದಲ್ಲಿ ಆಂತರಿಕ ಚರ್ಚೆಗೆ ಅವಕಾಶ ಮಾಡಿಕೊಡಲಿದೆ. ಒಂದು ವೇಳೆ ವಿಪಕ್ಷ ನಾಯಕನ ವಿರುದ್ಧ ಹೆಚ್ಚಿನ ಸಂಸದರು ಅಸಮಾಧಾನ ವ್ಯಕ್ತಪಡಿಸಿದರೆ, ಗೌಪ್ಯ ಮತದಾನ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com