ಲಾಡೆನ್‌ನ ಆದರ್ಶ ಜೀವನಕ್ಕೆ 4 ಹೆಂಡ್ತಿರು ಸೂಕ್ತ ಸಿದ್ಧಾಂತ ಮೆಚ್ಚಿದ ಹೆಡ್ಲಿ

ಉಗ್ರ ಡೇವಿಡ್ ಹೆಡ್ಲಿ ಮೃತ ಒಸಾಮ ಬಿನ್ ಲಾಡೆನ್ ನ ಥಿಯರಿ ಆಫ್ ವುಮನ್ ಸಿದ್ಧಾಂತವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಎಂದು ಪತ್ತೆದಾರಿ ಪತ್ರಕರ್ತ ಕಾರೆ ಸೋರೆನ್...
ಡೇವಿಡ್ ಹೆಡ್ಲಿ, ಒಸಾಮ ಬಿನ್ ಲಾಡೆನ್
ಡೇವಿಡ್ ಹೆಡ್ಲಿ, ಒಸಾಮ ಬಿನ್ ಲಾಡೆನ್

ನವದೆಹಲಿ: ಉಗ್ರ ಡೇವಿಡ್ ಹೆಡ್ಲಿ ಮೃತ ಒಸಾಮ ಬಿನ್ ಲಾಡೆನ್ ನ ಥಿಯರಿ ಆಫ್ ವುಮನ್ ಸಿದ್ಧಾಂತವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಎಂದು ಪತ್ತೆದಾರಿ ಪತ್ರಕರ್ತ ಕಾರೆ ಸೋರೆನ್ ಸನ್ ಅವರ ದಿ ಮೈಂಡ್ ಆಫ್ ಎ ಟೆರರಿಸ್ಟ್ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಮೊಹಮ್ಮದ್ ಪೈಗಂಬರ್ ಕೂಡ ನಾಲ್ಕು ಮದುವೆ ಆದರ್ಶ ಜೀವನದ ಸಂಕೇತ ಎಂದು ಹೇಳಿದ್ದರು ಎಂದಿದ್ದ ಹೆಡ್ಲಿ, ಲಾಡೆನ್ ಕೂಡ ನಾಲ್ಕು ಮದುವೆ ಮಾಡಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯ ಹೊಂದಿದ್ದ ಎಂದು ಹೆಡ್ಲಿ ಹೇಳಿದ್ದಾಗಿ ಕಾರೆ ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದಾನೆ.

ಬಿನ್ ಲಾಡೆನ್ ತಂದೆ ಮೊಹಮ್ಮದ್ ಬಿನ್ ಲಾಡೆನ್ 22 ಪತ್ನಿಯರನ್ನು ಕಟ್ಟಿಕೊಂಡು 54 ಮಕ್ಕಳನ್ನು ಪಡೆದಿದ್ದ. ಅಂದರಂತೆ ಲಾಡೆನ್ ಕೂಡ ತನ್ನ 6 ಪತ್ನಿಯರಿಂದ 20 ಮಕ್ಕಳನ್ನು ಪಡೆದಿದ್ದ ಆತ ಜೀವನದಲ್ಲಿ ನಾಲ್ಕು ಪತ್ನಿಯರನ್ನು ಹೊಂದುವುದು ಆದರ್ಶ ಜೀವನಕ್ಕೆ ಅಡಿಪಾಯ ಎಂದು ಲಾಡೆನ್ ನಂಬಿದ್ದ ಎಂದು ಕಾರೆ ಬರೆದಿದ್ದಾರೆ.

ಪಾಕಿಸ್ತಾನ ಹೆಣ್ಣುಮಕ್ಕಳಿಗಿಂತ ಅರಬ್ ಮಹಿಳೆಯರು ಹೆಚ್ಚು ಬುದ್ಧಿವಂತರಾಗಿದ್ದು ಅವರನ್ನು ಮದುವೆಯಾಗುವುದು ಉತ್ತಮ ಎಂದು ಹೇಳಿದ್ದಾಗಿ ಕಾರೆ ತಮ್ಮ ಪುಸ್ತಕದಲ್ಲಿ ಸ್ಪಷ್ಟಪಡಿಸಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com