ಸಲಿಂಗಕಾಮಿಗಳ ಬಳಿ ಚರ್ಚ್, ಕ್ರೈಸ್ತರು ಕ್ಷಮೆ ಯಾಚಿಸಬೇಕು: ಪೋಪ್ ಪ್ರಾನ್ಸಿಸ್

ಪೋಪ್ ಪ್ರಾನ್ಸಿಸ್, ಚರ್ಚ್ ಸಲಿಂಗಕಾಮಿಗಳನ್ನು ನಡೆಸಿಕೊಂಡಿರುವ ರೀತಿಗೆ ಕ್ರೈಸ್ತರು ಹಾಗೂ ರೋಮನ್ ಕ್ಯಾಥೋಲಿಕ್ ಚರ್ಚ್ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ.
ಪೋಪ್ ಪ್ರಾನ್ಸಿಸ್
ಪೋಪ್ ಪ್ರಾನ್ಸಿಸ್

ರೋಮ್: ಸಲಿಂಗ ಕಾಮಿಗಳನ್ನು ನಡೆಸಿಕೊಂಡಿರುವ ರೀತಿಗೆ ಚರ್ಚ್ ಕ್ಷಮೆ ಯಾಚಿಸಬೇಕು ಎಂದು ಜರ್ಮನಿಯ ಕಾರ್ಡಿನಲ್ ರೀನ್ಹಾರ್ಡ್ ಮಾರ್ಕ್ಸ್ ಹೇಳಿಕೆ ನೀಡಿದ್ದ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿರುವ ಪೋಪ್ ಪ್ರಾನ್ಸಿಸ್, ಚರ್ಚ್ ಸಲಿಂಗಕಾಮಿಗಳನ್ನು ನಡೆಸಿಕೊಂಡಿರುವ ರೀತಿಗೆ ಕ್ರೈಸ್ತರು ಹಾಗೂ ರೋಮನ್ ಕ್ಯಾಥೋಲಿಕ್ ಚರ್ಚ್ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ.

ಅರ್ಮೇನಿಯಾದಿಂದ ರೋಮ್ ಗೆ ವಾಪಸ್ಸಾಗುತ್ತಿದ್ದ ವೇಳೆ ಕಾರ್ಡಿನಲ್ ರೀನ್ಹಾರ್ಡ್ ಮಾರ್ಕ್ಸ್ ಹೇಳಿಕೆ ಬಗ್ಗೆ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿರುವ ಕ್ರೈಸ್ತ ಧರ್ಮಗುರು ಪೋಪ್ ಪ್ರಾನ್ಸಿಸ್, ಕ್ರೈಸ್ತರು ಕೇವಲ ಸಲಿಂಗ ಕಾಮಿಗಳ ವಿಷಯದಲ್ಲಿ ಮಾತ್ರವಲ್ಲದೇ ಅದೆಷ್ಟೋ ವಿಷಯಗಳಿಗೆ ಕ್ಷಮೆ ಯಾಚಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಬ್ಬ ವ್ಯಕ್ತಿ ಸಲಿಂಗಕಾಮಿಯಾಗಿದ್ದರೆ ಅದನ್ನು ಪ್ರಶ್ನಿಸಲು ನಾನು ಯಾರು ಎಂದು ಪ್ರಾನ್ಸಿಸ್ ಪ್ರಶ್ನಿಸಿದ್ದಾರೆ. ಪೋಪ್ ಅವರ ಈ ಹೇಳಿಕೆ, ವ್ಯಾಟಿಕನ್ ಸಲಿಂಗ ಕಾಮಿಗಳ ಬಗ್ಗೆ ಮೃದು ಧೋರಣೆ ಅನುಸರಿಸುವ ನಿರೀಕ್ಷೆಯನ್ನು ಹುಟ್ಟಿಹಾಕಿದೆ. ಸಲಿಂಗಕಾಮಿಗಳಷ್ಟೇ ಅಲ್ಲದೆ ಈ ಹಿಂದೆ ಚರ್ಚ್ ನಿಂದ ತಾರತಮ್ಯಕ್ಕೊಳಗಾದವರನ್ನು ಚರ್ಚ್, ಕ್ರೈಸ್ತರು ಕ್ಷಮೆ ಯಾಚಿಸಬೇಕೆಂದು ಪೋಪ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com