ದಲೈಲಾಮಾ ಭೇಟಿ ನಂತರ ಗಾಯಕಿ ಲೇಡಿ ಗಾಗಾರನ್ನು ನಿಷೇಧಿಸಿದ ಚೈನಾ

ಯೋಗ ಬಗ್ಗೆ ಚರ್ಚಿಸಲು ಟಿಬೆಟ್ ಧರ್ಮಗುರು ದಲೈ ಲಾಮಾ ಅವರನ್ನು ಭೇಟಿ ಮಾಡಿದ್ದ ಅಮೆರಿಕಾ ಗಾಯಕಿ ಲೇಡಿ ಗಾಗ ಅವರನ್ನು ಚೈನಾದ ಕಮ್ಯುನಿಸ್ಟ್ ಪಕ್ಷ ನಿಷೇಧಿಸಿದೆ ಎಂದು ವರದಿಯಾಗಿದೆ.
ಟಿಬೆಟ್ ಧರ್ಮಗುರು ದಲೈ ಲಾಮಾ ಅವರನ್ನು ಭೇಟಿ ಮಾಡಿದ ಅಮೆರಿಕಾ ಗಾಯಕಿ ಲೇಡಿ ಗಾಗ
ಟಿಬೆಟ್ ಧರ್ಮಗುರು ದಲೈ ಲಾಮಾ ಅವರನ್ನು ಭೇಟಿ ಮಾಡಿದ ಅಮೆರಿಕಾ ಗಾಯಕಿ ಲೇಡಿ ಗಾಗ
ಬೀಜಿಂಗ್: ಯೋಗ ಬಗ್ಗೆ ಚರ್ಚಿಸಲು ಟಿಬೆಟ್ ಧರ್ಮಗುರು ದಲೈ ಲಾಮಾ ಅವರನ್ನು ಭೇಟಿ ಮಾಡಿದ್ದ ಅಮೆರಿಕಾ ಗಾಯಕಿ ಲೇಡಿ ಗಾಗ ಅವರನ್ನು ಚೈನಾದ ಕಮ್ಯುನಿಸ್ಟ್ ಪಕ್ಷ ನಿಷೇಧಿಸಿದೆ ಎಂದು ವರದಿಯಾಗಿದೆ. 
ಈ ಭೇಟಿಗೆ ಬೀಜಿಂಗ್ ಆಕ್ರೋಶದಿಂದ ಪ್ರತಿಕ್ರಿಯಿಸಿತ್ತು. ಧರ್ಮ ಗುರು 'ಸಂತನ ಬಟ್ಟೆಯಲ್ಲಿ ಅವಿತುಕೊಂಡಿರುವ ತೋಳ' ಎಂದು ಟೀಕಿಸಿತ್ತು ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. 
ಇಂಡಿಯಾನಾಪೊಲೀಸ್ ನಲ್ಲಿ ಸಮ್ಮೇಳನಕ್ಕೂ ಮುಂಚಿತವಾಗಿ ಜೂನ್ 26ರಂದು ಗಾಗಾ ಟಿಬೆಟ್ ನಿಂದ ಗಡಿಪಾರಾಗಿರುವ ಬೌದ್ಧ ಧರ್ಮ ಗುರುವನ್ನು ಭೇಟಿಯಾಗಿದ್ದರು. 
ಈ ಸಭೆಯ 19 ನಿಮಿಷದ ವಿಡಿಯೋದಲ್ಲಿ ಇಬ್ಬರೂ, ಆಧ್ಯಾತ್ಮ, ಧ್ಯಾನ, ಮಾನಸಿಕ ಆರೋಗ್ಯ, ಮಾನವತೆಯಲ್ಲಿ ಹೊಕ್ಕಿರುವ ನಂಜನ್ನು ಕೊನೆಗಾಣಿಸುವುದು ಇತ್ಯಾದಿಯನ್ನು ಚರ್ಚಿಸಿದ್ದರು. 
ಈ ಭೇಟಿಯ ನಂತರ ಕಮ್ಯುನಿಸ್ಟ್ ಪಕ್ಷದ ನಿಗೂಢ ಪ್ರಚಾರ ಇಲಾಖೆ ಗಾಗಾ ಅವರ ಪ್ರದರ್ಶನದ ಇಲ್ಲ ಸಿಡಿ-ಡಿವಿಡಿಗಳನ್ನು ಚೈನಾ, ಹಾಕಾಂಗ್ ಗಳಲ್ಲಿ ನಿಷೇಧಿಸಿ ಆದೇಶ ಹೊರಡಿಸಿದೆ ಎಂದು ಪ್ರಜಾಪ್ರಭುತ್ವದ ಪರವಾದ ದಿನಪತ್ರಿಕೆ ಆಪಲ್ ಡೈಲಿ ಸೋಮವಾರ ವರದಿ ಮಾಡಿದೆ. 
ಅವರ ಹಾಡುಗಳನ್ನು ಚೈನಾ ಮಾಧ್ಯಮಗಳು ಮತ್ತು ಅಂತರ್ಜಾಲಗಳು ಅಪ್ಲೋಡ್ ಮಾಡಬಾರದೆಂದು ಕೂಡ ಆದೇಶಿಸಲಾಗಿದೆ ಎಂದು ದಿನಪತ್ರಿಕೆ ವರದಿ ಮಾಡಿದೆ. 
ಅಲ್ಲದೆ ಪಕ್ಷದ ಹಿಡಿತದಲ್ಲಿರುವ ಇಲ್ಲ ಪತ್ರಿಕೆಗಳು, ಟಿವಿ ವಾಹಿನಿಗಳು ಈ ಭೇಟಿಯನ್ನು ಖಂಡಿಸುವಂತೆ ತಾಕೀತು ಮಾಡಿದೆ. ಈ ಹಿಂದೆ ಕೂಡ ದಲೈಲಾಮ ಅವರನ್ನು ಭೇಟಿ ಮಾಡಿದ್ದಕ್ಕೆ ಅಥವಾ ಟಿಬೆಟ್ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದಕ್ಕೆ ಮರೂನ್5, ಬಿಜಾರ್ಕ್ ಮತ್ತಿ ಓಯಸಿಸ್ ಸಂಗೀತ ಕೂಟಗಳನ್ನು ಪ್ರದರ್ಶನ ನೀಡದಂತೆ ಚೈನಾ ನಿಷೇದಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com