ಆಫ್ಘಾನಿಸ್ತಾನದ ಭಾರತೀಯ ದೂತವಾಸ ಕಚೇರಿ ಬಳಿ ಬಾಂಬ್ ಸ್ಫೋಟ: ನಾಲ್ವರು ಉಗ್ರರು ಸಾವು

ಪೂರ್ವ ಅಫ್ಘಾನಿಸ್ತಾನ ನಗರದ ಜಲಾಲಬಾದ್ ನಲ್ಲಿರುವ ಭಾರತೀಯ ದೂತಾವಾಸ ಕಚೇರಿ ಮೇಲೆ ಆತ್ಮಹತ್ಯಾ ಬಾಂಬ್ ದಾಳಿಕೋರನೊಬ್ಬ ...
ದಾಳಿ ನಡೆದ ದೂತಾವಾಸ ಕಚೇರಿಯ ಸಮೀಪದ ಸ್ಥಳ
ದಾಳಿ ನಡೆದ ದೂತಾವಾಸ ಕಚೇರಿಯ ಸಮೀಪದ ಸ್ಥಳ

ಜಲಾಲಾಬಾದ್: ಪೂರ್ವ ಅಫ್ಘಾನಿಸ್ತಾನ ನಗರದ ಜಲಲಬಾದ್ ನಲ್ಲಿರುವ ಭಾರತೀಯ ದೂತಾವಾಸ ಕಚೇರಿ ಮೇಲೆ ಆತ್ಮಹತ್ಯಾ ಬಾಂಬ್ ದಾಳಿಕೋರನೊಬ್ಬ ದಾಳಿ ನಡೆಸಿರುವ ಮತ್ತು ಭದ್ರತಾ ಪಡೆ ಯೋಧರು ಹಾಗೂ ಉಗ್ರಗಾಮಿಗಳು ಗುಂಡಿನ ಚಕಮಕಿ ನಡೆಸಿರುವ ಘಟನೆ ಬುಧವಾರ ಅಪರಾಹ್ನ ನಡೆದಿದೆ. ಘಟನೆಯಲ್ಲಿ ನಾಲ್ವರು ಉಗ್ರಗಾಮಿಗಳು ಸಾವನ್ನಪ್ಪಿ ಮಗು ಸೇರಿದಂತೆ 14 ಮಂದಿ ಗಾಯಗೊಂಡಿದ್ದಾರೆ.

ನಮ್ಮ ದೇಶದ ರಾಯಭಾರಿಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿತ್ತು ಎಂದು ವಿದೇಶಾಂಗ ವ್ಯವಹಾರ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.

ಅಲ್ಲದೆ ಭಾರತ ಟಿಬೆಟಿಯನ್ ಗಡಿ ಪೊಲೀಸರು ಮತ್ತು ಅಫ್ಘಾನಿಸ್ತಾನ ಭದ್ರತಾ ಪಡೆ ಯೋಧರು ಉಗ್ರಗಾಮಿಗಳ ಜೊತೆ ಗುಂಡಿನ ದಾಳಿಯಲ್ಲಿ ನಿರತರಾಗಿದ್ದರು.
ಇದುವರೆಗೆ ದಾಳಿಯ ಹೊಣೆಯನ್ನು ಯಾವುದೇ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿಲ್ಲ. ಕಳೆದ ಜನವರಿಯಲ್ಲಿ ಉತ್ತರ ಆಫ್ಘನ್ ನ ಮಜರ್ -ಇ-ಶರೀಫ್ ನಲ್ಲಿರುವ ಭಾರತೀಯ ದೂತವಾಸ ಕಚೇರಿಯು ದಾಳಿಗೊಳಗಾಗಿತ್ತು.

ದೂತವಾಸ ಕಚೇರಿಯ ಸಮೀಪವಿರುವ ಅಂಗಡಿ ಮಾಲೀಕ ಸುದ್ದಿಸಂಸ್ಥೆಗೆ ನೀಡಿರುವ ಮಾಹಿತಿ ಪ್ರಕಾರ, ಕಚೇರಿಯ ಸುತ್ತಮುತ್ತ ಹಲವರು ಗಾಯಗೊಂಡು ಬಿದ್ದಿರುವುದನ್ನು ನೋಡಿದೆ. ತಮ್ಮ ಅಂಗಡಿಯ ಕಿಟಕಿಯಿಂದ ಬಾಂಬ್ ವೊಂದು ಸ್ಫೋಟಗೊಂಡ ಶಬ್ಧ ಕೇಳಿಸಿತು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com