ಹಿಲರಿ, ಡೊನಾಲ್ಡ್ ಗೆ ಭರ್ಜರಿ ಗೆಲುವು
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಸ್ಥಾನದ ಪ್ರಬಲ ಸ್ಪರ್ಧಿಗಳಾದ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಹಾಗೂ ಹಿಲ್ಲರಿ ಕ್ಲಿಂಟನ್ ಅವರ ಡೆಮಾಕ್ರಟಿಕ್ ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ ಎದುರಾಗಿದೆ. ಮಂಗಳವಾರ ಪ್ರಾಥಮಿಕ ಹಂತದ ಚುನಾವಣೆಗಳಲ್ಲಿ ಸರಣಿ ಜಯ ಸಾಧಿಸುವ ಮೂಲಕ ಅಧ್ಯಕ್ಷೀಯ ಚುನಾವಣೆಯ ನಾಮ ನಿರ್ದೇಶನಕ್ಕೆ ಭಾರೀ ಪೈಪೋಟಿ ಒಡ್ಡುತ್ತಿದ್ದಾರೆ.
ಡೊನಾಲ್ಡ್ ಟ್ರಂಪ್ ಮತ್ತು ಹಿಲ್ಲರಿ ಕ್ಲಿಂಟನ್ ತಲಾ 7 ರಾಜ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಪ್ರತಿಸ್ಪರ್ಧಿ ಟೆಕ್ಸಾಸ್ ನ ಸೆನೆಟರ್ ಆಗಿರುವ ಟೆಡ್ ಕ್ರೂಸ್ ತಮ್ಮ ರಾಜ್ಯದಲ್ಲಿ ಮತ್ತು ನೆರೆಯ ಒಕ್ಲಹೋಮಾದಲ್ಲಿ ಗೆಲುವು ಕಂಡಿದ್ದಾರೆ. ಯುಎಸ್ ಸೆನೆಟರ್ ಫ್ಲೋರಿಡಾದ ಮಾರ್ಕೋ ರುಬಿಯೋ ಅವರ ಫಲಿತಾಂಶ ಇನ್ನಷ್ಟೇ ಘೋಷಣೆಯಾಗಬೇಕಿದೆ. ಅಲ್ಲಿ ಇನ್ನೂ ಮತ ಎಣಿಕೆ ಮುಗಿದಿಲ್ಲ.
ಡೊನಾಲ್ಡ್ ಟ್ರಂಪ್ ಅವರು ವರ್ಜೀನಿಯಾ, ಅರ್ಕನ್ಸಾಸ್, ಅಲಬಮಾ, ಮಸ್ಸಚುಸೆಟ್ಸ್, ಟೆನ್ನೆಸ್ಸೀ, ವೆರ್ಮಂಟ್ ಮತ್ತು ಜಾರ್ಜಿಯಾ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಹಿಲರಿ ಕ್ಲಿಂಟನ್ ಅಲಬಮಾ, ಮಸ್ಸಚುಸೆಟ್ಸ್, ಟೆನ್ನೆಸ್ಸೀ, ವೆರ್ಮಂಟ್ ಮತ್ತು ಜಾರ್ಜಿಯಾ, ಮಸ್ಸಚುಸೆಟ್ಸ್, ಟೆನ್ನೆಸ್ಸೀ, ಟೆಕ್ಸಾಸ್ ಮತ್ತು ವರ್ಜೀನಿಯಾದಲ್ಲಿ ಗೆಲುವಿನ ನಗೆ ಬೀರಿದ್ದಾರೆ. 12 ರಾಜ್ಯಗಳಲ್ಲಿ 11 ರಾಜ್ಯಗಳ ಫಲಿತಾಂಶ ಬಂದಿದೆ.
ಇಲ್ಲಿ ಅಭ್ಯರ್ಥಿಗಳು ರಾಜ್ಯಗಳು ಗೆಲ್ಲುವುದು ಮಾತ್ರ ಮುಖ್ಯವಾಗುವುದಿಲ್ಲ. ನಾಮ ನಿರ್ದೇಶನಗೊಳ್ಳಲು ಪ್ರತಿನಿಧಿಗಳು ಮುಖ್ಯವಾಗುತ್ತಾರೆ.
ಅಮೆರಿಕದ 58ನೇ ಅಧ್ಯಕ್ಷರ ಚುನಾವಣೆ ಈ ವರ್ಷ ನವೆಂಬರ್ 8 ರಂದು ನಡೆಯಲಿದೆ. ಅಮೆರಿಕದ 50 ರಾಜ್ಯಗಳಲ್ಲಿ ಪ್ರಾಥಮಿಕ ಹಂತದ ಚುನಾವಣೆ ಜೂನ್ ವರೆಗೆ ಮುಂದುವರಿಯಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ