ಪಾಕಿಸ್ತಾನ ಭೇಟಿಗೆ ನವಾಜ್ ಷರೀಫ್ ಆಹ್ವಾನವನ್ನು ಒಪ್ಪಿದ ಪೋಪ್ ಫ್ರಾನ್ಸಿಸ್

ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಪೋಪ್ ಫ್ರಾನ್ಸಿಸ್ ಅವರಿಗೆ ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದು ಇದಕ್ಕೆ ಪೋಪ್ ಫ್ರಾನ್ಸಿಸ್ ಒಪ್ಪಿಗೆ ಸೂಚಿಸಿದ್ದಾರೆ.
ಪೋಪ್ ಫ್ರಾನ್ಸಿಸ್
ಪೋಪ್ ಫ್ರಾನ್ಸಿಸ್

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಪೋಪ್ ಫ್ರಾನ್ಸಿಸ್ ಅವರಿಗೆ ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದು ಇದಕ್ಕೆ ಪೋಪ್ ಫ್ರಾನ್ಸಿಸ್ ಒಪ್ಪಿಗೆ ಸೂಚಿಸಿದ್ದಾರೆ.
ವ್ಯಾಟಿಕನ್ ನೀಡಿರುವ ಸಂದೇಶದ ಪ್ರಕಾರ, ಪಾಕಿಸ್ತಾನದ ಬಂದರು ಮತ್ತು ನೌಕಾಯಾನ ಸಚಿವ ಕಮ್ರಾನ್ ಮೈಕೆಲ್ ಮತ್ತು ಧಾರ್ಮಿಕ ವ್ಯವಹಾರಗಳ ಸಚಿವ ಸರ್ದಾರ್ ಯೂಸೂಫ್ ಪೋಪ್ ಗೆ ಆಹ್ವಾನ ನೀಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಫೆ.23 ರಂದು ವ್ಯಾಟಿಕನ್ ಗೆ ತೆರಳಿದ್ದ ಕಮ್ರಾನ್ ಮೈಕೆಲ್, ನಿಯೋಗದೊಂದಿಗೆ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದರು. ಕ್ಯಾಥೋಲಿಕ್ ನ ಧರ್ಮಗುರುಗಳಾಗಿರುವ ಪೋಪ್ ಫ್ರಾನ್ಸಿಸ್ ಪಾಕಿಸ್ತಾನ ಹಾಗೂ ಭಯೋತ್ಪಾದನೆಯ ಬಲಿಪಶುಗಳಾಗಿರುವ ಪಾಕಿಸ್ತಾನದ ಜನತೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.  
1981 ರಲ್ಲಿ ಪೋಪ್ ಜಾನ್ ಪಾಲ್ II ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಕೊನೆಯ ಕ್ರೈಸ್ತ ಧರ್ಮಗುರುಗಳಾಗಿದ್ದರು. ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಶೇ.1.6 ರಷ್ಟು ಕ್ರೈಸ್ತ ಧರ್ಮೀಯರು ನೆಲೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com