ಪಂಜಾಬಿ ಭಾಷೆಯನ್ನು ಪಾಕಿಸ್ತಾನದ ರಾಷ್ಟ್ರಭಾಷೆಯನ್ನಾಗಿಸಿ: ಉಗ್ರ ಹಫೀಜ್ ಸಯೀದ್

ನಿಷೇಧಿತ ಉಗ್ರ ಸಂಘಟನೆ ಜಮಾತ್- ಉದ್- ದವಾ ದ ಮುಖ್ಯಸ್ಥ ಹಫೀಜ್ ಸಯೀದ್ ಪಂಜಾಬಿ ಭಾಷೆಯನ್ನು ಪಾಕಿಸ್ತಾನದ ರಾಷ್ಟ್ರಭಾಷೆಯನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದ್ದಾನೆ.
ಹಫೀಜ್ ಸಯೀದ್
ಹಫೀಜ್ ಸಯೀದ್

ಲಾಹೋರ್: ನಿಷೇಧಿತ ಉಗ್ರ ಸಂಘಟನೆ ಜಮಾತ್- ಉದ್- ದವಾ ದ ಮುಖ್ಯಸ್ಥ ಹಫೀಜ್ ಸಯೀದ್ ಪಂಜಾಬಿ ಭಾಷೆಯನ್ನು ಪಾಕಿಸ್ತಾನದ ರಾಷ್ಟ್ರಭಾಷೆಯನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದ್ದಾನೆ.
ಉರ್ದು ಭಾಷೆಯನ್ನು ಪಾಕಿಸ್ತಾನದ ರಾಷ್ಟ್ರಭಾಷೆನ್ನಾಗಿ ಘೋಷಿಸುವ ಪಾಕಿಸ್ತಾನದ ನಿರ್ಧಾರವನ್ನು ಪ್ರಶ್ನಿಸಿರುವ ಹಫೀಜ್ ಸಯೀದ್, ಪಂಜಾಬಿ ಪಾಕಿಸ್ತಾನದ ಬಹುಸಂಖ್ಯಾತರು ಮಾತನಾಡುವ ಭಾಷೆಯಾಗಿದೆ. ಆದ್ದರಿಂದ ಅದನ್ನೇ ರಾಷ್ಟ್ರಭಾಷೆಯನ್ನಾಗಿ ಘೋಷಿಸಬೇಕು ಎಂದು ಹೇಳಿದ್ದಾನೆ.
ಪಂಜಾಬಿ ಭಾಷೆಯ ಲಿಪಿ ಗುರ್ಮುಖಿಯಾಗಿರುವುದರಿಂದ  1947 ರಲ್ಲಿ ಪಾಕಿಸ್ತಾನ ಅದನ್ನು ರಾಷ್ಟ್ರಭಾಷೆಯನ್ನಾಗಿ ಘೋಷಿಸಲಿಲ್ಲ. ಒಂದು ವೇಳೆ ಅದನ್ನು ರಾಷ್ಟ್ರ ಭಾಷೆಯನ್ನಾಗಿ ಘೋಷಿಸಿದ್ದರೆ, ಪಾಕಿಸ್ತಾನ ರಚನೆಯಾದ ಎರಡು ರಾಷ್ಟ್ರಗಳ ನಿರ್ಧಾರವನ್ನೇ ಪ್ರಶ್ನೆ ಮಾಡುವಂತಾಗುತ್ತಿತ್ತು  ತಾನೂ ಸಹ ಪಂಜಾಬಿ ಭಾಷೆ ಮಾತನಾಡುವ ವ್ಯಕ್ತಿಯಲ್ಲ, ಆದರೆ ಪಂಜಾಬಿಯನ್ನು ರಾಷ್ಟ್ರಭಾಷೆಯನ್ನಾಗಿಸಿದರೆ ದೇಶ ಒಗ್ಗಟ್ಟಿನಿಂದ ಇರಲು ಸಾಧ್ಯ ಎಂದು ಹಫೀಜ್ ಸಯೀದ್ ಹೇಳಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com