ಜುಲೈಯೊಳಗೆ ಎಂಎಚ್ 370 ವಿಮಾನ ಅವಶೇಷ ಪತ್ತೆ: ತನಿಖಾ ತಂಡ

ನಿಗೂಢವಾಗಿ ನಾಪತ್ತೆಯಾಗಿರುವ ಎಂಎಚ್ 370 ವಿಮಾನ ಅವಶೇಷವನ್ನು ಜುಲೈಯೊಳಗೆ ಪತ್ತೆ ಹಚ್ಚಲಾಗುವುದು ಎಂದು ತನಿಖಾ ತಂಡದ ಮುಖ್ಯಸ್ಥ ಮಾರ್ಟಿನ್...
ಎಂಎಚ್ 370
ಎಂಎಚ್ 370
ಲಂಡನ್: ನಿಗೂಢವಾಗಿ ನಾಪತ್ತೆಯಾಗಿರುವ ಎಂಎಚ್ 370 ವಿಮಾನ ಅವಶೇಷವನ್ನು ಜುಲೈಯೊಳಗೆ ಪತ್ತೆ ಹಚ್ಚಲಾಗುವುದು ಎಂದು ತನಿಖಾ ತಂಡದ ಮುಖ್ಯಸ್ಥ ಮಾರ್ಟಿನ್ ಡೋಲನ್ ಹೇಳಿದ್ದಾರೆ. 
ಎಂಎಚ್ ವಿಮಾನ ನಾಪತ್ತೆಯಾಗಿ ಎರಡು ವರ್ಷಗಳೆ ಆಗಿದ್ದು, ಇಂದಿಗೂ ವಿಮಾನ ಸಂಪೂರ್ಣ ಅವಶೇಷಗಳು ಪತ್ತೆಯಾಗದೆ ಇನ್ನೂ ನಿಗೂಢವಾಗಿ ಉಳಿದಿದೆ. ಕಳೆದ ವರ್ಷ ವಿಮಾನ ಬಿಡಿಭಾಗವೊಂದು ಫ್ರೆಂಚ್ ಐಸ್ ಲ್ಯಾಂಡ್ ನಲ್ಲಿ ಸಿಕ್ಕಿತ್ತು. ಆದರೆ ಪೂರ್ತಿ ಪ್ರಮಾಣದ ಅವಶೇಷಗಳು ಇನ್ನು ಪತ್ತೆಯಾಗಿಲ್ಲ. 
ಮಾರ್ಚ್ 2014ರಿಂದ ವಿಮಾನವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಆಸ್ಟ್ರೇಲಿಯಾದ ಸಾರಿಗೆ ಸುರಕ್ಷತೆ ಬ್ಯೂರೋ ನಿರತವಾಗಿದೆ. ಇನ್ನು ನಾಲ್ಕು ತಿಂಗಳೊಳಗಾಗಿ ವಿಮಾನದ ಅವಶೇಷ ಪತ್ತೆ ಹಚ್ಚಲಾಗುವುದು ಎಂದು ಮಾರ್ಟಿನ್ ಡೋಲನ್ ಹೇಳಿದ್ದಾರೆ. 
2014ರ ಮಾರ್ಚ್ ನಲ್ಲಿ ವಿಮಾನದ 8 ಸಿಬ್ಬಂದಿ ಹಾಗೂ 227 ಪ್ರಯಾಣಿಕರನ್ನು ಹೊತ್ತ ಎಂಎಚ್ 370 ಕೌಲಾಲಂಪುರ್ ನಿಂದ ಬಿಜೀಂಗ್ ಗೆ ತೆರಳುತ್ತಿತ್ತು. ಆದರೆ ಮಾರ್ಗಮಧ್ಯೆ ವಿಮಾನದ ಸಿಗ್ನಲ್ ಗಳು ಸ್ಥಗಿತಗೊಂಡು ವಿಮಾನ ನಿಗೂಢವಾಗಿ ನಾಪತ್ತೆಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com