ಜಮಾತ್ ಮುಖಂಡನ ಮರಣದಂಡನೆ ಎತ್ತಿಹಿಡಿದ ಬಾಂಗ್ಲಾ ಸುಪ್ರೀಂ ಕೋರ್ಟ್

೧೯೭೧ರ ಸ್ವಾತಂತ್ರ್ಯ ಯುದ್ಧದ ಸಮಯದಲ್ಲಿ ಬೆಂಗಾಳಿಗಳ ಮೇಲೆ ದೌರ್ಜನ್ಯವೆಸಗಿದ ಆರೋಪದಲ್ಲಿ ಆಲ್-ಬದರ್ ಮತ್ತು ಜಮಾತ್ ಎ ಇಸ್ಲಾಮಿ ಪಕ್ಷದ ಮಾಜಿ ನಾಯಕ ಮಿರ್ ಕ್ವಾಸೆಮ್
ಮಿರ್ ಕ್ವಾಸೆಮ್ ಅಲಿ
ಮಿರ್ ಕ್ವಾಸೆಮ್ ಅಲಿ
Updated on

ಢಾಕಾ: ೧೯೭೧ರ ಸ್ವಾತಂತ್ರ್ಯ ಯುದ್ಧದ ಸಮಯದಲ್ಲಿ ಬೆಂಗಾಳಿಗಳ ಮೇಲೆ ದೌರ್ಜನ್ಯವೆಸಗಿದ ಆರೋಪದಲ್ಲಿ ಆಲ್-ಬದರ್ ಮತ್ತು ಜಮಾತ್ ಎ ಇಸ್ಲಾಮಿ ಪಕ್ಷದ ಮಾಜಿ ನಾಯಕ ಮಿರ್ ಕ್ವಾಸೆಮ್ ಅಲಿಗೆ ನೀಡಲಾಗಿದ್ದ ಮಣದಂಡನೆ ಶಿಕ್ಷೆಯನ್ನು ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಆಲ್-ಬದರ್ ಪಶ್ಚಿಮ ಪಾಕಿಸ್ತಾನ ಸೇನೆಯ ಸಾಂವಿಧಾನಿಕ ಪಕ್ಷವಾಗಿತ್ತು ಮತ್ತು ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾ ದೇಶದಲ್ಲಿ) ತನ್ನ ಕಾರ್ಯ ನಿರ್ವಹಿಸುತ್ತಿತ್ತು,. ಬಾಂಗ್ಲಾದೇಶದ ಸ್ವಾತಂತ್ರ್ಯ ಯುದ್ಧದ ವೇಳೆಯಲ್ಲಿ ಬೆಂಗಾಳಿ ರಾಷ್ಟ್ರೀಯ ಚಳುವಳಿಯ ಸಮಯಲ್ಲಿ ಈ ಪಕ್ಷದ ನಾಯಕರು ಬೆಂಗಾಳಿಗಳ ಮೇಲೆ ದೌರ್ಜನ್ಯ ಎಸಗಿದ್ದರು.

ಆಲ್-ಬದರ್ ನ ಚಿತ್ತಗಾಂಗ್ ಪ್ರಾದೇಶಿಕ ಕಮ್ಯಾಂಡರ್ ಆಗಿ ಕ್ವಾಸೆಮ್ ಎಸಗಿರುವ ಕ್ರಿಮಿನಲ್ ಅಪರಾಧಗಳನ್ನು ಈ ತೀರ್ಪು ಮತ್ತೆ ತಿಳಿಸಿ ಮರಣದಂಡನೆ ತೀರ್ಪನ್ನು ಎತ್ತಿಹಿಡಿದಿದೆ.

ದೇಶದಾದ್ಯಂತ ಈ ತೀರ್ಪನ್ನು ಸಂಭ್ರಮಿಸಲಾಗಿದ್ದು, ಕೆಲವು ಸ್ಥಳಗಳಲ್ಲಿ ಸಂಭ್ರಮದ ರ್ಯಾಲಿ ಏರ್ಪಡಿಸಲಾಗಿತ್ತು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com