ಇನ್ ಸ್ಟಂಟ್ ನೂಡಲ್ಸ್ ಹಾಗೂ ಹಾಲಿನ ಪುಡಿಯಿಂದ ಮಕ್ಕಳು ಸಲಿಂಗಕಾಮಿಗಳಾಗುತ್ತಾರೆ

ಶಿಶುಗಳಿಗೆ ಇನ್ ಸ್ಟಂಟ್ ನೂಡಲ್ಸ್ ಮತ್ತು ಹಾಲಿನ ಪುಡಿ ನೀಡುವುದರಿಂದ ಅವರು ಸಲಿಂಗಕಾಮಿಗಳಾಗುತ್ತಾರೆ ಎಂದು ಇಂಡೋನೇಶಿಯಾ ಮೇಯರ್ ವಿವಾದಾತ್ಮಕ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಕಾರ್ತ: ಶಿಶುಗಳಿಗೆ ಇನ್ ಸ್ಟಂಟ್ ನೂಡಲ್ಸ್ ಮತ್ತು ಹಾಲಿನ ಪುಡಿ ನೀಡುವುದರಿಂದ ಅವರು ಸಲಿಂಗಕಾಮಿಗಳಾಗುತ್ತಾರೆ ಎಂದು ಇಂಡೋನೇಶಿಯಾ ಮೇಯರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜಕಾರ್ತದಲ್ಲಿ ನಡೆದ ಗರ್ಭಿಣಿಯರ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಜಕಾರ್ತ ಮೇಯರ್ ಆರೀಫ್ ವಿಸ್ಮಾನ್ಸ್ಯಾಯ್ ಈ ಹೇಳಿಕೆ ನೀಡಿದ್ದಾರೆ.

ಇಂದಿನ ದಿನಗಳಲ್ಲಿ ಪೋಷಕರು ತುಂಬಾ ಬ್ಯುಸಿಯಾಗಿದ್ದು, ಮಕ್ಕಳಿಗೆ ಆರೋಗ್ಯಯುತ ಪೌಷ್ಠಿಕ ಆಹಾರ ತಯಾರಿಸಿಕೊಡಲು ಅವರಿಗೆ ಸಮಯವಿಲ್ಲ. ಹೀಗಾಗಿ ತಕ್ಷಣಕ್ಕೆ ಕೊಡುವ ಇನ್ ಸ್ಟಂಟ್ ಆಹಾರ ನೀಡುತ್ತಾರೆ. ಇದರಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮವಾಗುತ್ತದೆ ಎಂದು ಹೇಳಿದ್ದಾರೆ.

ಸಂಪ್ರದಾಯಸ್ಥ ಮುಸ್ಲಿಮರೇ ಬಹುತೇಕ ಇರುವ ಇಂಡೋನೇಶಿಯಾದಲ್ಲಿ ಒಂದು ಸಣ್ಣ ಸಲಿಂಗಕಾಮಿಗಳ ಗುಂಪು ಹುಟ್ಟಿಕೊಂಡಿರುವುದು ಆತಂಕ ಮೂಡಿಸಿದೆ ಎಂದು ಹೇಳಿದ್ದಾರೆ.

ತಾಯಂದಿರು ಮಕ್ಕಳಿಗೆ ಇನ್ ಸ್ಟಂಟ್ ಫುಡ್ ನೀಡುವ ಬದಲು ಅವಶ್ಯಕ ಪೌಷ್ಠಿಕ ಆಹಾರ ನೀಡಬೇಕು ಜೊತೆಗೆ ಸ್ತನಪಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು . ಆ ಮೂಲಕ ದೇಶದ ಪ್ರಜೆಗಳನ್ನು ಆರೋಗ್ಯವಂತರಾಗಿಸಬೇಕು ಎಂದು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com