ಹೆರಿಗೆ ಕೋಣೆಯಲ್ಲಿ ಅಲಹಾ (ಕೃಪೆ: ಇನ್ ಸ್ಟಾ ಗ್ರಾಂ)
ವಿದೇಶ
ಹೆರಿಗೆ ಕೋಣೆಯಲ್ಲಿ ಮೇಕಪ್ ಮಾಡಿದ ಗರ್ಭಿಣಿ, ವೈರಲ್ ಆಯ್ತು ಫೋಟೋ
ನ್ಯೂಯಾರ್ಕ್‌ನ ಮೇಕಪ್ ಕಲಾವಿದೆಯಾದ ಅಲಾಹಾ ಎಂಬ ಗರ್ಭಿಣಿ, ಹೆರಿಗೆ ಕೋಣೆಯಲ್ಲಿ ಮೇಕಪ್ ಮಾಡಿಕೊಂಡು ಸಮಯ...
ನ್ಯೂಯಾರ್ಕ್: ಆಸ್ಪತ್ರೆಯ ಹೆರಿಗೆ ಕೋಣೆಯಲ್ಲಿನ ಭಯ ಹೋಗಲಾಡಿಸುವುದಕ್ಕೆ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡುವುದಕ್ಕಾಗಿ ಕೆಲವು ಗರ್ಭಿಣಿಯರು ಹಾಡು ಕೇಳುವುದುಂಟು. ಇನ್ನು ಕೆಲವರು ಪುಸ್ತಕ ಓದುವುದು, ಪ್ರಾರ್ಥನೆ ಮಾಡುವುದು ಹೀಗೆ ಕೆಲವು ಚಟುವಟಿಕೆಗಳನ್ನು ಮಾಡುತ್ತಾರೆ.
ಆದರೆ ನ್ಯೂಯಾರ್ಕ್‌ನ ಮೇಕಪ್ ಕಲಾವಿದೆಯಾದ ಅಲಾಹಾ ಕರೀಮಿ ಎಂಬ ಗರ್ಭಿಣಿ, ಹೆರಿಗೆ ಕೋಣೆಯಲ್ಲಿ ಮೇಕಪ್ ಮಾಡಿಕೊಂಡು ಸಮಯ ಕಳೆದಿದ್ದಾರೆ.
ತಾನು ಹೆರಿಗೆ ಕೋಣೆಗೆ ಹೋದ ಕೂಡಲೇ ಸ್ವಲ್ಪ ಹೊತ್ತು ಪುಸ್ತಕ ಓದಿದೆ. ಆಮೇಲೆ ತಲೆ ನೋವು ಬಂತು. ಪುಸ್ತಕವನ್ನು ತೆಗೆದಿಟ್ಟು ನಾನು ಮೇಕಪ್ ಮಾಡುತ್ತಾ ಕುಳಿತೆ ಎಂದು ಮೇಕಪ್ ಮಾಡುತ್ತಿರುವ ಫೋಟೋವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಗರ್ಭಿಣಿ ಮಹಿಳೆಯರು ಮಾನಸಿಕ ಒತ್ತಡ ನಿಭಾಯಿಸುವುದಕ್ಕಾಗಿ ತಮಗಿಷ್ಟವಾದ ಕಾರ್ಯಗಳನ್ನು ಮಾಡಲು ಪ್ರೇರೇಪಿಸಬೇಕೆಂದು ಅಲಹಾ ಹೇಳಿದ್ದಾರೆ.
ಹೆರಿಗೆ ಕೋಣೆಯ ಮಂಚದ ಮೇಲೆ ಎಲ್ಲ ಮೇಕಪ್ ವಸ್ತುಗಳನ್ನಿರಿಸಿ ಮೇಕಪ್ ಮಾಡಿಕೊಂಡಾಗ ನನಗೆ ಆತ್ಮವಿಶ್ವಾಸ ಸಿಕ್ಕಿತು ಎಂದು ಹೇಳಿ ಅಲಹಾ ಫೋಟೋ ಶೇರ್ ಮಾಡಿದ್ದರು.
ಗರ್ಭಿಣಿಯೊಬ್ಬಳು ಹೆರಿಗೆ ಕೋಣೆಯಲ್ಲಿ ಮೇಕಪ್ ಮಾಡುತ್ತಿರುವ ಈ ಫೋಟೋ ಸಾಮಾಜಿಕ ತಾಣದಲ್ಲೀಗ ವೈರಲ್ ಆಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ