ಮೊದಲ ಬಾರಿಗೆ ಪಾಕ್ ಸಿಂಧ್ ಪ್ರಾಂತ್ಯದಲ್ಲಿ ‘ಹೋಳಿ’ ಹಬ್ಬಕ್ಕೆ ಸಾರ್ವತ್ರಿಕ ರಜೆ

ಮಾರ್ಚ್ 20ರ ಹೋಳಿ ಹಬ್ಬಕ್ಕೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯವು ಸಾರ್ವತ್ರಿಕ ರಜೆ ಘೋಷಿಸಿದೆ...
ಹೋಳಿ
ಹೋಳಿ

ಇಸ್ಲಾಮಾಬಾದ್: ಮಾರ್ಚ್ 20ರ ಹೋಳಿ ಹಬ್ಬಕ್ಕೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯವು ಸಾರ್ವತ್ರಿಕ ರಜೆ ಘೋಷಿಸಿದೆ.

ಹಿಂದು ಸಮುದಾಯದ ಧಾರ್ಮಿಕ ಹಬ್ಬವಾದ ಹೋಳಿ ಹಬ್ಬಕ್ಕೆ ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಸಾರ್ವತ್ರಿಕ ರಜಾ ಘೋಷಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಶನಿವಾರ ಹೋಳಿ ಹಬ್ಬಕ್ಕೆ ಸಿಂಧ್ ಪ್ರಾಂತೀಯ ಸರ್ಕಾರ ಸಾರ್ವತ್ರಿಕ ರಜೆ ನೀಡಿರುವ ಸಂಬಂಧ ಪ್ರಕಟಣೆ ಹೊರಡಿಸಿದೆ. ಈ ಮುನ್ನ ಹಿಂದು ಸಮುದಾಯಕ್ಕೆ ಮಾತ್ರವೇ ಹೋಳಿ ಹಬ್ಬದ ಕಾಲದಲ್ಲಿ ರಜಾ ನೀಡಲಾಗುತ್ತಿದ್ದು ಎಂದು ಸರ್ಕಾರಿ ವಕ್ತಾರರು ತಿಳಿಸಿರುವುದಾಗಿ ಡಾನ್ ವರದಿ ಮಾಡಿದೆ.

ಹಿಂದು ಹಬ್ಬಗಳಾದ ಹೋಳಿ, ದೀಪಾವಳಿ ಮತ್ತು ಕೈಸ್ತರ ಈಸ್ಟರ್ ಹಬ್ಬಗಳ ದಿನಗಳಂದು ಅಲ್ಪಸಂಖ್ಯಾತರಿಗೆ ರಜಾ ದಿನಗಳು ಎಂಬುದಾಗಿ ಘೋಷಿಸಲು ರಾಷ್ಟ್ರೀಯ ಅಸೆಂಬ್ಲಿ ನಿರ್ಣಯ ಕೈಗೊಂಡ ಬಳಿಕ ಸಿಂಧ್ ಪ್ರಾಂತೀಯ ಸರ್ಕಾರ ಈ ಕ್ರಮ ಕೈಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com