ಬಾಂಗ್ಲಾದಲ್ಲಿ ಕ್ರೈಸ್ತ ಧರ್ಮೀಯನ ಹತ್ಯೆ, ಉಳಿದವರಿಗೆ ಎಚ್ಚರಿಕೆ: ಹೊಣೆ ಹೊತ್ತ ಇಸೀಸ್

ಬಾಂಗ್ಲಾ ದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಕ್ರೈಸ್ತ ವ್ಯಕ್ತಿಯೊಬ್ಬರ ಹತ್ಯೆಗೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊಣೆ ಹೊತ್ತಿದ್ದು, ಕ್ರೈಸ್ತ ವ್ಯಕ್ತಿಯ ಹತ್ಯೆ ಇತರರಿಗೆ ಪಾಠ ಎಂದು ಎಚ್ಚರಿಸಿದೆ.
ಇಸೀಸ್ ಉಗ್ರರು(ಸಂಗ್ರಹ ಚಿತ್ರ)
ಇಸೀಸ್ ಉಗ್ರರು(ಸಂಗ್ರಹ ಚಿತ್ರ)
Updated on: 
ಢಾಕಾ: ಬಾಂಗ್ಲಾ ದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಕ್ರೈಸ್ತ ಧರ್ಮೀಯಯೊಬ್ಬರ ಹತ್ಯೆಗೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊಣೆ ಹೊತ್ತಿದ್ದು, ಕ್ರೈಸ್ತ ವ್ಯಕ್ತಿಯ ಹತ್ಯೆ ಇತರರಿಗೆ ಪಾಠ ಎಂದು ಎಚ್ಚರಿಸಿದೆ. 
ಬಾಂಗ್ಲಾದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಧಾರ್ಮಿಕ ಉದಾರವಾದಿಗಳ ಹತ್ಯೆ ಹೆಚ್ಚಾಗುತ್ತಿದ್ದು ಇಸ್ಲಾಮಿಕ್ ಉಗ್ರ ಸಂಘಟನೆಗಳು ಇದರ ಹಿಂದಿವೆ ಎಂದು ಶಂಕಿಸಲಾಗಿದೆ. ಇತ್ತೀಚೆಗೆ ಇಸ್ಲಾಂ ನಿಂದ ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದ ವ್ಯಕ್ತಿಯೊಬ್ಬನ ಹತ್ಯೆ ನಡೆದಿತ್ತು. ಈ ಹತ್ಯೆಯ ಹೊಣೆಯನ್ನು ಇಸ್ಲಾಮಿಕ್ ಉಗ್ರ ಸಂಘಟನೆ ಹೊತ್ತಿದ್ದು, ಇದು ಇತರರಿಗೆ ಪಾಠವಾಗಲಿ ಎಂದು ಎಚ್ಚರಿಕೆ ನೀಡಿದೆ. 
ಅಮೆರಿಕ ಮೂಲದ ಎಸ್ ಐಟಿಇ ಗುಪ್ತಚರ ಇಲಾಖೆ ಬಾಂಗ್ಲಾದೇಶದಲ್ಲಿ ನಡೆದ ಹತ್ಯೆಯ ಬಗ್ಗೆ ಹೇಳಿಕೆ ನೀಡಿದ್ದು, ಉತ್ತರ ಢಾಕಾದಲ್ಲಿ ನಡೆದ ಹುಸೇನ್ ಸರ್ಕಾರ್ ಹತ್ಯೆಗೆ ಇಸ್ಲಾಮಿಕ್ ಉಗ್ರ ಸಂಘಟನೆ ಹೊಣೆ ಹೊತ್ತಿದೆ ಎಂದು ಹೇಳಿದೆ. ಇದಕ್ಕೆ ಪೂರಕವಾಗಿ ಇಸ್ಲಾಮಿಕ್ ಉಗ್ರ ಸಂಘಟನೆಯ ಟ್ವಿಟರ್ ಖಾತೆಯಲ್ಲಿ ಮತಾಂತರಗೊಂಡಿದ್ದ ಮುಸ್ಲಿಂ ವ್ಯಕ್ತಿಯ ಹತ್ಯೆಯ ಬಗ್ಗೆ ಇಸೀಸ್ ಟ್ವೀಟ್ ಮಾಡಿದ್ದು ಉಳಿದವರಿಗೆ ಎಚ್ಚರಿಕೆ ನೀಡಿದೆ. 
ಹತ್ಯೆಗೀಡಾದ ವ್ಯಕ್ತಿ 1999 ರಲ್ಲಿ ಇಸ್ಲಾಂ ನಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು, ಆದರೆ ಕ್ರೈಸ್ತ ಧರ್ಮದ ಪ್ರಚಾರದಲ್ಲಿ ತೊಡಗಿರಲಿಲ್ಲ ಎಂದು ಬಾಂಗ್ಲಾ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com