ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬ್ರಸೆಲ್ಸ್ ದಾಳಿ: 242 ಭಾರತೀಯರು ಸುರಕ್ಷಿತವಾಗಿ ತವರಿಗೆ

ಬ್ರಸೆಲ್ಸ್ ವಿಮಾನ ನಿಲ್ದಾಣ ಮತ್ತು ಮೊಟ್ರೊ ನಿಲ್ದಾಣಗಳಲ್ಲಿ ನಡೆದ ಬಾಂಬ್ ದಾಳಿಯಿಂದ ಪಾರಾದ ಭಾರತೀಯರನ್ನು...
Published on
ನವದೆಹಲಿ: ಬ್ರಸೆಲ್ಸ್ ವಿಮಾನ ನಿಲ್ದಾಣ ಮತ್ತು ಮೊಟ್ರೊ ನಿಲ್ದಾಣಗಳಲ್ಲಿ ನಡೆದ ಬಾಂಬ್ ದಾಳಿಯಿಂದ ಪಾರಾದ ಭಾರತೀಯರನ್ನು ಶುಕ್ರವಾರ ಭಾರತಕ್ಕೆ ಕರೆತರಲಾಗಿದೆ.
28 ವಿಮಾನ ಸಿಬ್ಬಂದಿ ಸೇರಿದಂತೆ 242 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಇಂದು ಕರೆತಲಾಗಿದೆ. ಬ್ರಸೆಲ್ಸ್ ವಿಮಾನ ನಿಲ್ದಾಣ ಮತ್ತು ಮೆಟ್ರೊ ನಿಲ್ದಾಣಗಳಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಜೆಟ್ ಏರ್ ವೇಸ್ ನ ಇಬ್ಬರು ಭಾರತೀಯ ಸಿಬ್ಬಂದಿಗಳಾದ ಅಮಿತ್ ಮೋಟ್ವಾನಿ ಮತ್ತು ಗಗನ ಸಖಿ ಗಾಯಗೊಂಡಿದ್ದು, ಇನ್ನುಳಿದ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದರು. 
ಇಸಿಸ್ ಉಗ್ರರ ವಿರುದ್ಧ ಕಾರ್ಯಾಚರಣೆಯ ಕೇಂದ್ರ ಬಿಂದುವೆನಿಸಿರುವ ಬೆಲ್ಜಿಯಂ ರಾಜಧಾನಿ ಬ್ರೆಸೆಲ್ಸ್ ನಲ್ಲಿ ಮಂಗಳವಾರ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿತ್ತು. ಸರಣಿ ಬಾಂಬ್ ಸ್ಫೋಟದಲ್ಲಿ 35ಕ್ಕೂ ಹೆಚ್ಚು ಜನರು ಸಾವನಪ್ಪಿ, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 
ಉಗ್ರರ ಅವಳಿ ಆತ್ಮಾಹುತಿ ದಾಳಿ ನಡೆಯುವುದಕ್ಕೆ ಕೆಲವೇ ನಿಮಿಷ ಮೊದಲು ಮುಂಬಯಿ ಮತ್ತು ದಿಲ್ಲಿಯಿಂದ ತೆರಳಿದ್ದ ಜೆಟ್ ಏರ್ ವೇಸ್ ನ ಎರಡು ವಿಮಾನಗಲು ಬ್ರಸೆಲ್ಸ್ ನಲ್ಲಿ ಲ್ಯಾಂಡ್ ಆಗಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com