ಇಸಿಸ್ ಉಗ್ರರಿಂದ ಫಾದರ್ ಟಾಮ್ ಅಪಹರಣ: ಖಚಿತ ಪಡಿಸಿದ ಸುಷ್ಮಾ ಸ್ವರಾಜ್

ಯೆಮನ್ ನಲ್ಲಿ ಇಸಿಸ್ ಉಗ್ರರಿಂದ ಫಾದರ್ ಟಾಮ್ ಅಪಹರಣಕ್ಕೊಳಗಾಗಿದ್ದಾರೆಂದು ಖಚಿತ ಪಡಿಸಿರುವ ವಿದೇಶಾಂಗ...
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ನವದೆಹಲಿ: ಯೆಮನ್ ನಲ್ಲಿ ಇಸಿಸ್ ಉಗ್ರರಿಂದ ಫಾದರ್ ಟಾಮ್ ಅಪಹರಣಕ್ಕೊಳಗಾಗಿದ್ದಾರೆಂದು ಖಚಿತ ಪಡಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಫಾದರ್ ಟಾಮ್ ಅವರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಇಸಿಸ್ ಉಗ್ರರು ಫಾದರ್ ಟಾಮ್ ಅವರನ್ನು ಅಪಹರಿಸಿ ಎಲ್ಲಿ ಇರಿಸಿಕೊಂಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಘಟನೆಯ ವಿವರಗಳನ್ನೆಲ್ಲಾ ಪಡೆಯಲಾಗಿದ್ದು, ತಜ್ಞರ ಜೊತೆ ಮಾತುಕತೆ ನಡೆಸಿ, ಪತ್ತೆ ಹಚ್ಚು ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು, ಫಾದರ್ ಟಾಮ್ ಅವರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ಭರವಸೆ ನೀಡಿದ್ದಾರೆ. 
ಟಾಮ್ ಅವರು ಯೆಮನ್ ನ ಮದರ್ ತೆರೆಸಾ ಮಿಷನರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಯೆಮನ್ ನಲ್ಲಿ ಮಾರ್ಚ್ 4ರಂದು ವೃದ್ಧಾಶ್ರಮದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ 16 ಮಂದಿಯನ್ನು ಹತ್ಯೆಗೈಯ್ಯಲಾಗಿತ್ತು. ಈ ವೇಳೆ ಫಾದರ್ ಟಾಮ್ ಉಳುನ್ನಲಿಲ್ ಅವರನ್ನು ನಾಲ್ವರು ಬಂದೂಕುದಾರಿಗಳು ಅಪಹರಿಸಿದ್ದರು. ಆ ಬಂದೂಕುಧಾರಿಗಳು ಇಸಿಸ್ ಉಗ್ರ ಸಂಘಟನೆಗೆ ಸೇರಿದವರು ಎಂದು ಹೇಳಲಾಗುತ್ತಿದೆ. 
ಇತ್ತೀಚೆಗೆ ಅಂತರ್ಜಾಲದಲ್ಲಿ ಟಾಮ್ ಅವರನ್ನು ಗುಡ್ ಫ್ರೈ ಡೇ ದಿನ ಗಲ್ಲಿಗೇರಿಸಲಾಗುತ್ತಿದೆ ಎಂಬ ಕಮೆಂಟುಗಳು ಹರಿದಾಡುತ್ತಿತ್ತು. ಇದಕ್ಕೆ ಕ್ರಿಶ್ಚಿಯನ್ ಸಂಘಟನೆಗಳು ಆತಂಕ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com