ವೀರ್ಯದಾನ ಮಾಡಿ ಮಗುವಿಗೆ ಕಾರಣನಾದವನನ್ನು ಪತ್ತೆ ಮಾಡಿ ವಿವಾಹವಾದ ಮಹಿಳೆ!

ಬ್ರಿಟನ್ ಸಂಜಾತ ಆಸ್ಟ್ರೇಲಿಯಾದ ಮಹಿಳೆಯೊಬ್ಬರು ತಮಗೆ ವೀರ್ಯದಾನ ಮಾಡಿದ್ದ ಪುರುಷನನ್ನು ಪತ್ತೆ ಮಾಡಿ ವಿವಾಹವಾಗಿದ್ದಾರೆ.
ವೀರ್ಯದಾನ ಮಾಡಿದವನನ್ನು ಪತ್ತೆ ಮಾಡಿ ವಿವಾಹವಾದ ಮಹಿಳೆ!
ವೀರ್ಯದಾನ ಮಾಡಿದವನನ್ನು ಪತ್ತೆ ಮಾಡಿ ವಿವಾಹವಾದ ಮಹಿಳೆ!

ಮೆಲ್ಬೋರ್ನ್: ಐವಿಎಫ್ ಚಿಕಿತ್ಸೆ ಮೂಲಕ ಮಕ್ಕಳು ಪಡೆಯುವವರಿಗೆ ತಮಗೆ ವೀರ್ಯ ದಾನ ಮಾಡಿದ ಪುರುಷನ ವಿವರಗಳನ್ನು ನೀಡಲಾಗುವುದಿಲ್ಲ. ಆದರೆ ಬ್ರಿಟನ್ ಸಂಜಾತ ಆಸ್ಟ್ರೇಲಿಯಾದ ಮಹಿಳೆಯೊಬ್ಬರು ತಮಗೆ ವೀರ್ಯದಾನ ಮಾಡಿದ್ದ ಪುರುಷನನ್ನು ಪತ್ತೆ ಮಾಡಿ ವಿವಾಹವಾಗಿದ್ದಾರೆ.

ಅಮಿನಾಹ್ ಹಾರ್ಟ್ ಎಂಬ ಮಹಿಳೆ ಐವಿಎಫ್ ಚಿಕಿತ್ಸೆ ಮೂಲಕ ಹೆಣ್ಣು ಮಗುವನ್ನು ಪಡೆದಿದ್ದರು. ಈ ಮಗುವಿನ ಜೈವಿಕ ತಂದೆ ಸ್ಕಾಟ್ ಆಂಡರ್ಸನ್. ಇಂಟರ್ ನೆಟ್ ಮೂಲಕ ತನ್ನ ಮಗುವಿನ ಜೈವಿಕ ತಂದೆಯನ್ನು ಪತ್ತೆ ಮಾಡಿರುವ ಮಹಿಳೆ, ಕೊನೆಗೂ ಆತನನ್ನು ವಿವಾಹವಾಗುವುದರಲ್ಲಿ ಯಶಸ್ವಿಯಾಗಿದ್ದಾರೆ.

ಐವಿಎಫ್ ಕ್ಲಿನಿಕ್ ನ ಅಧಿಕೃತ ಮೂಲಗಳ ಸಹಾಯದಿಂದ ಆಂಡರ್ಸನ್ ತನ್ನ ಮಗುವಿನ ಜೈವಿಕ ತಂದೆ ಎಂಬುದನ್ನು ತಿಳಿದ ಮಹಿಳೆ, ಇ-ಮೇಲ್ ಮೂಲಕ ಆತನನ್ನು ಸಂಪರ್ಕಿಸಿದ್ದಾರೆ. ಮಗು ತನ್ನನ್ನೇ ಹೋಲುತ್ತಿತ್ತು ಆದ್ದರಿಂದ, ಮಗು ಹಾಗೂ ತಾಯಿಯನ್ನು ಭೇಟಿ ಮಾಡಲು ಆಂಡ್ರಸನ್ ಸಹ ಒಪ್ಪಿದ್ದಾರೆ.   

ಭೇಟಿಯಾದ ಎರಡು ವರ್ಷಗಳ ನಂತರ ಇಬ್ಬರೂ ಪರಸ್ಪರ ಒಪ್ಪಿ ವಿವಾಹವಾಗಿದ್ದಾರೆ. ಐವಿಎಫ್ ಚಿಕಿತ್ಸೆ ಪಡೆದ ಮಹಿಳೆಗೆ  ಇದಕ್ಕೂ ಮುನ್ನ ಇಬ್ಬರು ಮಕ್ಕಳಿದ್ದರು. ಆದರೆ ಇಬ್ಬರೂ ಸಾವನ್ನಪ್ಪಿದ್ದರ ಕಾರಣ ಆಕೆ ಐವಿಎಫ್ ಚಿಕಿತ್ಸೆ ಮೂಲಕ ಮತ್ತೊಂದು ಮಗು ಪಡೆಯಲು ನಿರ್ಧರಿಸಿದ್ದರು. ತಮ್ಮ ಅನುವಂಶಿಕ ಸಮಸ್ಯೆಯಿಂದಾಗಿ ಆಕೆ ಪಡೆಯುವ ಗಂಡು ಮಕ್ಕಳಿಗೆ ಸಮಸ್ಯೆ ಉಂಟಾಗುತ್ತಿತ್ತು. ಆದ್ದರಿಂದ ಈ ಹಿಂದಿನ ಇಬ್ಬರೂ ಗಂಡು ಮಕ್ಕಳು ಸಾವನ್ನಪ್ಪಿದ್ದರು ಎಂದು ಆಮಿನಾಹ್ ಹಾರ್ಟ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com