ಮೌಂಟ್ ಎವರೆಸ್ಟ್ ಪರ್ವತದಲ್ಲಿ ಬಿರುಕು; ಪರ್ವತಾರೋಹಿಗಳಲ್ಲಿ ಆತಂಕ

ನೇಪಾಳದಲ್ಲಿ ಕಳೆದ ವರ್ಷ ಸಂಭವಿಸಿದ ಭಾರಿ ಭೂಕಂಪದ ನಂತರದ ನಿರಂತರ ಕಂಪನಗಳ ಪರಿಣಾಮವಾಗಿ ಎವರೆಸ್ಟ್‌ ಪರ್ವತ ಪ್ರದೇಶದ ಅನೇಕ ಕಡೆ ಬಿರುಕುಗಳು ..
ಮೌಂಟ್ ಎವರೆಸ್ಟ್
ಮೌಂಟ್ ಎವರೆಸ್ಟ್

ಕಠ್ಮಂಡು: ಕಳೆದ ವರ್ಷ ನೇಪಾಳದಲ್ಲಿ   ಸಂಭವಿಸಿದ ಭಾರಿ ಭೂಕಂಪದ ನಂತರದ ನಿರಂತರ ಕಂಪನಗಳ ಪರಿಣಾಮವಾಗಿ ಎವರೆಸ್ಟ್‌ ಪರ್ವತ ಪ್ರದೇಶದ ಅನೇಕ ಕಡೆ ಬಿರುಕುಗಳು ಕಾಣಿಸಿಕೊಂಡಿವೆ ಎಂದು ಎವರೆಸ್ಟ್‌ ಪರ್ವತಾರೋಹಣ ಮಾರ್ಗ ನಿರ್ವಹಣೆಯ ಹೊಣೆ ಹೊತ್ತಿರುವ ತಜ್ಞರ ತಂಡ ನೇಪಾಳ ಸರ್ಕಾರಕ್ಕೆ ಈ ಮಾಹಿತಿ ನೀಡಿದೆ.

ಕಳೆದ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಸಂಭವಿಸಿದ ಭೂಕಂಪದಲ್ಲಿ 9 ಸಾವಿರ ಜನ ಸಾವಿಗೀಡಾಗಿದ್ದರು. ಇದರ ನಂತರದ ಹಲವಾರು ಕಂಪನಗಳ ಪರಿಣಾಮವಾಗಿ ಎವರೆಸ್ಟ್‌ ಪರ್ವತಕ್ಕೆ ಕೊಂಚ ಹಾನಿ ಉಂಟಾಗಿದೆ ಎಂದು ನೇಪಾಳ ಪರ್ವತಾರೋಹಿಗಳ ಸಂಘದ ಅಧ್ಯಕ್ಷ ಆಂಗ್‌ ತಷೆರಿಂಗ್‌ ಶೆರ್ಪಾ ತಿಳಿಸಿದ್ದಾರೆ.

ಪರ್ವತಾರೋಹಣ ಮಾರ್ಗದಲ್ಲಿ ಹಿಮಕುಸಿತವಾಗದಂತೆ ತಡೆಯುವ ಉದ್ದೇಶದಿಂದ ಪ್ರತಿ ವರ್ಷ ಪರ್ವತಾರೋಹಣದ ಆರಂಭಕ್ಕೂ ಮುನ್ನ ಏಣಿ ಹಾಗೂ ಹಗ್ಗಗಳನ್ನು ಅಳವಡಿಸಲಾಗುತ್ತದೆ. ಹಿಮಕುಸಿತ ಕುರಿತ ತಜ್ಞರ ತಂಡ ಈ ಜವಾಬ್ದಾರಿ ನಿಭಾಯಿಸುತ್ತದೆ. ಆದರೆ ಈ ಬಾರಿ ಮಾರ್ಗದಲ್ಲಿ ಬಿರುಕು ಹಾಗೂ ಕಿರು ಕಂದಕಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದರಿಂದಾಗಿ ಹೆಚ್ಚಿನ ಅಲ್ಯೂಮಿನಿಯಂ ಏಣಿಗಳು ಹಾಗೂ ಹಗ್ಗಗಳನ್ನು ಅಳವಡಿಸುವುದು ಅನಿವಾರ್ಯವಾಗಿದೆ.

ಮೊದಲ ಭೂಕಂಪನದ ನಂತರ ಇದುವರೆಗೆ ರಿಕ್ಟರ್‌ ಮಾಪಕದಲ್ಲಿ ನಾಲ್ಕಕ್ಕಿಂತ ಹೆಚ್ಚು ತೀವ್ರತೆಯ 440 ಕಂಪನಗಳು ದಾಖಲಾಗಿವೆ. ಇದರಿಂದಾಗಿ  ಎವರೆಸ್ಟ್‌ ಹಲವು ಕಡೆ ಬಿರುಕು ಬಿಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com