ಕಾಶ್ಮೀರ ವಿಮೋಚನೆಗೆ ಪಾಕ್ ರೂಪಿಸಿದ್ದ ತಂತ್ರ ತನಗೇ ಮುಳ್ಳಾಗಿದೆ: ಮಾಜಿ ರಾಯಭಾರಿ ಹುಸೇನ್ ಹಕ್ಕಿ

ಕಾಶ್ಮೀರ ವಿಮೋಚನೆಗೆ ಪಾಕಿಸ್ತಾನ ರೂಪಿಸಿದ್ದ ತಂತ್ರದಲ್ಲಿ ಭಾಗಿಯಾಗಿದ್ದ ಜಿಹಾದಿ ಗುಂಪುಗಳು ಈಗ ಪಾಕಿಸ್ತಾನಕ್ಕೆ ಮುಳುವಾಗಿದೆ ಎಂದು ಪಾಕ್ ನ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ ಹೇಳಿದ್ದಾರೆ.

ವಾಷಿಂಗ್ ಟನ್: ಕಾಶ್ಮೀರ ವಿಮೋಚನೆಗೆ ಪಾಕಿಸ್ತಾನ ರೂಪಿಸಿದ್ದ ತಂತ್ರದಲ್ಲಿ ಭಾಗಿಯಾಗಿದ್ದ ಜಿಹಾದಿ ಗುಂಪುಗಳು ಈಗ ಪಾಕಿಸ್ತಾನಕ್ಕೆ ಮುಳುವಾಗಿದೆ ಎಂದು ಪಾಕ್ ನ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ ಹೇಳಿದ್ದಾರೆ.

ಲಾಹೋರ್ ನಲ್ಲಿ ನಡೆದ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ರಾಯಭಾರಿ ಹಕ್ಕಾನಿ, ಪಾಕಿಸ್ತಾನದ ದಶಕಗಳ ಹಿಂದಿನಷ್ಟು ಯೋಜನೆ ಈಗ ಪಾಕಿಸ್ತಾನಕ್ಕೆ ಮುಳುವಾಗಿ ಪರಿಣಮಿಸಿರುವುದರಿಂದ ಎಲ್ಲಾ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಮಾಡಲೇ ಬೇಕಾದ ಸ್ಥಿತಿ ಎದುರಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಿಹಾದಿ ಗುಂಪುಗಳೊಂದಿಗೆ ಪಾಕಿಸ್ತಾನದ ನಂಟು ಮೊದಲ ಹಂತದಲ್ಲಿ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಕಾರ್ಯತಂತ್ರದ ಭಾಗವಾಗಿತ್ತು. ಆದರೆ ಇದು ಪಾಕಿಸ್ತಾನಕ್ಕೆ ಫಲ ನಿಡುವ ಬದಲು ಪಾಕಿಸ್ತಾನಕ್ಕೆ ಮುಳುವಾಗಿ ಪರಿಣಮಿಸಿದೆ ಎಂದು ಹಕ್ಕಾನಿ ಪಿಬಿಎಸ್ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ತನಗೇ ಕಂಟಕವಾಗಿ ಪರಿಣಮಿಸಿದ್ದರೂ ಸಹ ಪಾಕಿಸ್ತಾನ ಜಿಹಾದಿ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳುವುದರಲ್ಲಿಯೂ ಆಯ್ಕೆ ಮಾಡಿಕೊಳ್ಳುತ್ತಿದೆ ಆದ್ದರಿಂದಲೇ ಜಿಹಾದಿಗಳು ಶಿಯಾ, ಅಹ್ಮದಿಗಳು, ಕ್ರೈಸ್ತರ ವಿರುದ್ಧ ಮಾತ್ರ ದಾಳಿ ನಡೆಸುತ್ತಿದ್ದಾರೆ ಎಂದು ಹುಸೇನ್ ಹಕ್ಕಾನಿ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com