ಅವಶೇಷಗಳ ಅಡಿ 72 ಗಂಟೆಗಳ ಕಾಲ ಜೀವ ಹಿಡಿದಿದ್ದ ಪುಟ್ಟ ಕಂದಮ್ಮನ ರಕ್ಷಣೆ

ಅದೃಷ್ಟ ಮತ್ತು ಆಯಸ್ಸು ಗಟ್ಟಿಯಾಗಿದ್ದರೆ ಸಾವು ನಮ್ಮ ಬಳಿ ಬರಲು ಸಾಧ್ಯವಿಲ್ಲ ಎಂಬುದಕ್ಕೆ ಉತ್ತಮ ನಿದರ್ಶನ. ಹೌದು ಕಟ್ಟದ ಕುಸಿತಗೊಂಡ 72 ಗಂಟೆಗಳ ಬಳಿಕ ಕಟ್ಟಡದ...
ಕಟ್ಟಡ ಕುಸಿತ
ಕಟ್ಟಡ ಕುಸಿತ

ಅದೃಷ್ಟ ಮತ್ತು ಆಯಸ್ಸು ಗಟ್ಟಿಯಾಗಿದ್ದರೆ ಸಾವು ನಮ್ಮ ಬಳಿ ಬರಲು ಸಾಧ್ಯವಿಲ್ಲ ಎಂಬುದಕ್ಕೆ ಉತ್ತಮ ನಿದರ್ಶನ. ಹೌದು ಕಟ್ಟದ ಕುಸಿತಗೊಂಡ 72 ಗಂಟೆಗಳ ಬಳಿಕ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 1 ವರ್ಷದ ಪುಟ್ಟ ಕಂದಮ್ಮ ನನ್ನು ರಕ್ಷಣಾ ತಂಡ ರಕ್ಷಿಸಿದೆ.

ಭಾರೀ ಮಳೆಯಿಂದಾಗಿ ಕೀನ್ಯಾದ ನೈರೋಬಿಯಾದಲ್ಲಿ 6 ಅಂತಸ್ತಿನ ಕಟ್ಟಡವೊಂದು ಕುಸಿದಿದ್ದು, ಅವಶೇಷಗಳ ತೆರವು ಕಾರ್ಯಾಚರಣೆ ವೇಳೆ 1 ವರ್ಷದ ಹೆಣ್ಣು ಮಗುವನ್ನು ಕೀನ್ಯಾ ರೆಡ್ ಕ್ರಾಸ್ ಸಂಸ್ಥೆ ರಕ್ಷಿಸಿದೆ.

ರಕ್ಷಣೆ ಮಾಡಲಾಗಿರುವ ಪುಟ್ಟ ಮಗು ನಿತ್ರಾಣಗೊಂಡಿದ್ದು ಕೀನ್ಯಾದ ರಾಷ್ಟ್ರೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರೆಡ್ ಕ್ರಾಸ್ ಸಂಸ್ಥೆ ವಕ್ತಾರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಭಾರೀ ಮಳೆಯಿಂದಾಗಿ ಆರು ಅಂತಸ್ಥಿನ ಕಟ್ಟಡವೊಂದು ಕುಸಿದಿದ್ದು ಈ ದುರಂತದಲ್ಲಿ 22 ಮಂದಿ ಅಸುನೀಗಿದ್ದಾರೆ.

ಇನ್ನು ಕಟ್ಟದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 135 ಮಂದಿಯನ್ನು ರಕ್ಷಿಸಲಾಗಿದೆ ಎಂದು ಕೀನ್ಯಾ ರಾಷ್ಟ್ರೀಯ ವಿಪತ್ತು ಕಾರ್ಯಾಚರಣೆ ಕೇಂದ್ರ ನಿರ್ದೇಶಕ ಕೊಲೊನೆಲ್ ನಾಥನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com