10 ಉಗ್ರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಎನ್ ಐಎ

ಗುಜರಾತ್ ನ ಭರೂಚ್ ನಲ್ಲಿ ಇಬ್ಬರು ಆರ್ ಎಸ್ ಎಸ್ ಮುಖಂಡರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಗುಜರಾತ್ ನ ಭರೂಚ್ ನಲ್ಲಿ ಇಬ್ಬರು ಆರ್ ಎಸ್ ಎಸ್ ಮುಖಂಡರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ತಂಡ(ಎನ್ ಐಎ) 10 ಭಯೋತ್ಪಾದಕರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ. 
2015ರ ನವೆಂಬರ್ 2ರಂದು ಗುಜರಾತ್ ನ ಭರೂಚ್ ನಲ್ಲಿ ಇಬ್ಬರು ಆರ್ ಎಸ್ ಎಸ್ ಮುಖಂಡರನ್ನು ಡಿ ಕಂಪನಿ ಸಹಚರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಹತ್ಯೆಯ ತನಿಖೆ ನಡೆಸಿದ ಎನ್ ಐಎ ಪಾಕಿಸ್ತಾನದಲ್ಲಿರುವ ಜಾವೇದ್ ಚಿಕ್ನ ಮತ್ತು ದಕ್ಷಿಣ ಆಫ್ರಿಕಾದಲ್ಲಿರುವ ಜಾಹಿದ್ ಮಿಯಾನ್ ಅಲಿಯಾಸ್ ಜೋ ಹತ್ಯೆ ಮಾಸ್ಟರ್ ಮೈಂಡ್ ಗಳು ಎಂಬುದನ್ನು ಪತ್ತೆ ಹಚ್ಚಿತ್ತು. ಭೂಕತ ಪಾತಕಿ ದಾವೂದ್ ಇಬ್ರಾಹಿಂನ ಡಿ ಕಂಪನಿಯ ಹತ್ತು ಪ್ರಮುಖ ಸದ್ಯರ ವಿರುದ್ಧ ಎನ್ ಐ ಎ ಆರೋಪ ಪಟ್ಟಿ ಸಲ್ಲಿಸಿದೆ. 
10 ಉಗ್ರರಿಗೆ ಆರ್ ಎಸ್ ಎಸ್ ಮತ್ತು ಚರ್ಚುಗಳನ್ನು ಗುರಿ ಇರಿಸಿ ದಾಳಿ ನಡೆಸುವ ಮತ್ತು ಸಾಮಾಜಿಕ ಅಶಾಂತಿಯನ್ನು ಹುಟ್ಟು ಹಾಕುವ ಹೊಣೆಗಾರಿಯನ್ನು ವಹಿಸಲಾಗಿತ್ತು. ಎನ್ ಐಎ ಚಾರ್ಜ್ ಶೀಟ್ ದಾಖಲಿಸುವ ದಾವೂದ್ ಗ್ಯಾಂಗಿನ ಹತ್ತು ಉಗ್ರರೆಂದರೆ ಹಾಜಿ ಪಟೇಲ್, ಮೊಹಮ್ಮದ್ ಯುನಸ್ ಶೇಖ್, ಅಬ್ದುಲ್ ಸಮದ್, ಅಬೀದ್ ಪಟೇಲ್, ಮೊಹಮ್ಮದ್ ಅಲ್ ತಾಫ್, ಮೊಹಿಸಿನ್ ಖಾನ್ ಮತ್ತು ನಸೀರ್ ಅಹ್ಮದ್.
ಮುಂಬೈನಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಿದ್ದ ಚಿಕ್ನಾಗೆ ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನದ ಪ್ರಜೆ ಅಶಪಾಕ್ ಅನ್ಸಾರಿ ಪಿಸ್ತೂಲು ಮತ್ತು ಇನ್ನಿತರ ದಾಳಿಗೆ ಬಳಸಲಾಗುತ್ತಿದ್ದ ಆಯುಧಗಳನ್ನು ಪೂರೈಸಿದ್ದನು. ಅಷ್ಟೇ ಅಲ್ಲದೇ ಚಿಕ್ನಾ ತನ್ನ ದುಷ್ಕೃತ್ಯಗಳಿಗೆ ಯುವಕರನ್ನು ಬಳಸಿಕೊಳ್ಳುತ್ತಿದ್ದನು ಎಂದು ಎನ್ ಐಎ ಆರೋಪ ಪಟ್ಟಿಯಲ್ಲಿ ತಿಳಿಸಿದೆ.
ಆರೋಪಿ ಮೊಹಮ್ಮದ್ ಯುನಸ್ ಆರ್ ಎಸ್ ಎಸ್, ವಿಎಚ್ ಪಿ, ಭಜರಂಗ್ ದಳ್ ಮತ್ತು ಬಿಜೆಪಿ ನಾಯಕರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದನು. ಆ ಪಟ್ಟಿಯಲ್ಲಿ ಶಿರಿಶ್ ಬಾಯ್ ಬೆಂಗಾಲಿ, ವಕೀಲ ಮೋದಿ, ವಿರಾಲ್ ದೇಸಾಯ್ ಮತ್ತು ಜಾಯ್ಕರ್ ಮಹಾರಾಜ್ ಹೆಸರಿತ್ತು. ಅಷ್ಟೇ ಅಲ್ಲದೇ, ಹಿಂದೂ ಸಂಘಟನೆಗಳಲ್ಲಿ ಹೆಚ್ಚು ಹೆಸರು ಮಾಡಿರುವ ನಾಯಕರನ್ನು ಹತ್ಯೆ ಮಾಡಿ ಅದಕ್ಕೆ ಕೋಮುಗಲಭೆ ಉಂಟುಮಾಡಲು ಸಂಚು ರೂಪಿಸಿದ್ದರು ಎಂದು ಎನ್ ಐಎ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com