ಸಾರ್ವಭೌಮತೆಗೆ ಧಕ್ಕೆಯಾದರೇ ಮುಲಾಜಿಲ್ಲದೇ ಅಣುಬಾಂಬ್ ಪ್ರಯೋಗ: ಕಿಮ್ ಜಾಂಗ್

ದೇಶದ ಸಾರ್ವಭೌಮತ್ವಕ್ಕೆ ಯಾರಾದರೂ ಧಕ್ಕೆ ತಂದೆರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಅಣುಬಾಂಬ್ ಪ್ರಯೋಗಿಸುವುದಾಗಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್...
ಕಿಮ್ ಜಾಂಗ್ ಉನ್
ಕಿಮ್ ಜಾಂಗ್ ಉನ್

ಸಿಯೋಲ್: ದೇಶದ ಸಾರ್ವಭೌಮತ್ವಕ್ಕೆ ಯಾರಾದರೂ ಧಕ್ಕೆ ತಂದೆರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಅಣುಬಾಂಬ್ ಪ್ರಯೋಗಿಸುವುದಾಗಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಹೇಳಿದ್ದಾರೆ.

ಅಣ್ವಸ್ತ್ರ ಹೊಂದಿದ ರಾಷ್ಟ್ರಗಳಿಂದ ಉತ್ತರ ಕೊರಿಯಾದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುವುದನ್ನು ಸಹಿಸುವುದಿಲ್ಲ ಎಂದು ಪರೋಕ್ಷವಾಗಿ ಅಮೆರಿಕವನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ.

ಪರಮಾಣು ಪ್ರಸರಣ ನೀತಿಯನ್ನು ಅನುಸರಿಸುವುದಾಗಿ ಕಿಮ್ ಜಾನ್ ಉಂಗ್ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ. ಹಿಂದಿನ ದಿನಗಳಲ್ಲಿ ವೈರತ್ವ್ವ ಕಟ್ಟಿಕೊಂಡಿದ್ದ ರಾಷ್ಟ್ರಗಳ ಜತೆಗಿನ ಸಂಬಂಧ ವೃದ್ಧಿ ಮತ್ತು ಯಥಾಸ್ಥಿತಿ ಕಾಯ್ದುಕೊಳ್ಳಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

2003ರಲ್ಲಿ ಜಾಗತಿಕ ಪರಮಾಣು ನೀತಿ ಒಪ್ಪಂದ(ಎನ್​ಪಿಟಿ)ವನ್ನು ಉತ್ತರ ಕೊರಿಯಾ ಮುರಿದಿತ್ತು. ಹೀಗೆ ಮಾಡಿದ ಮೊದಲ ರಾಷ್ಟ್ರ ಎಂಬ ಕುಖ್ಯಾತಿಗೆ ಉತ್ತರ ಕೊರಿಯಾ ಪಾತ್ರವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com