ಬಾಂಗ್ಲಾದಲ್ಲಿ ಇಸ್ಲಾಮಿಕ್ ನಾಯಕನಿಗೆ ಗಲ್ಲು ಶಿಕ್ಷೆ ಜಾರಿ

1971 ರಲ್ಲಿ ನಡೆದಿದ್ದ ಬಾಂಗ್ಲಾ ವಿಮೋಚನೆ ಯುದ್ಧದಲ್ಲಿ ಯುದ್ಧಾಪರಾಧಿಯಾಗಿದ್ದ ಇಸ್ಲಾಮಿಕ್ ನಾಯಕನನ್ನು ಗಲ್ಲಿಗೇರಿಸಲಾಗಿದೆ.
ಇಸ್ಲಾಮಿಕ್ ನಾಯಕನಿಗೆ ಗಲ್ಲು ಶಿಕ್ಷೆ ಜಾರಿ
ಇಸ್ಲಾಮಿಕ್ ನಾಯಕನಿಗೆ ಗಲ್ಲು ಶಿಕ್ಷೆ ಜಾರಿ

ಢಾಕಾ: 1971 ರಲ್ಲಿ ನಡೆದಿದ್ದ ಬಾಂಗ್ಲಾ ವಿಮೋಚನೆ ಯುದ್ಧದಲ್ಲಿ ಯುದ್ಧಾಪರಾಧಿಯಾಗಿದ್ದ ಇಸ್ಲಾಮಿಕ್ ನಾಯಕನನ್ನು ಗಲ್ಲಿಗೇರಿಸಲಾಗಿದೆ.
ಮೊತಿ ಉರ್‌ ರೆಹಮಾನ್‌ ನಿಜಾಮಿ (72) ಮರಣದಂಡನೆಗೊಳಗಾದ ಇಸ್ಲಾಮಿಕ್ ನಾಯಕನಾಗಿದ್ದು, ಕ್ಷಮಾಧಾನ ಅರ್ಜಿ ತಿರಸ್ಕಾರಗೊಂಡಿದ್ದ ಹಿನ್ನೆಲೆಯಲ್ಲಿ ಗಲ್ಲಿಗೇರಿಸಲಾಗಿದೆ ಎಂದು ಬಾಂಗ್ಲಾದೇಶದ ಕಾನೂನು ಸಚಿವರು  ಮಾಹಿತಿ ನೀಡಿದ್ದಾರೆ. ಮೊತಿ ಉರ್‌ ರೆಹಮಾನ್‌ ನಿಜಾಮಿ ಬಾಂಗ್ಲಾದೇಶದ ಪ್ರಮುಖ ಪಕ್ಷವಾಗಿದ್ದ ಇಸ್ಲಾಮಿಕ್ ಪಕ್ಷವಾದ ಜಮಾತ್-ಎ- ಇಸ್ಲಾಮಿಯ ನೇತೃತ್ವ ವಹಿಸಿದ್ದರು. ಯುದ್ಧಾಪರಾಧ ಸಾಬೀತಾದ ಹಿನ್ನೆಲೆಯಲ್ಲಿ  ಈ ಹಿಂದೆಯೂ ಪಕ್ಷದ ಅನೇಕ ಮುಖಂಡರನ್ನು ಗಲ್ಲಿಗೇರಿಸಲಾಗಿತ್ತು. ಇದನ್ನು ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆಗಳು ನಡೆದಿದ್ದವು. 
ಬಾಂಗ್ಲಾ ವಿಮೋಚನೆ ಸಂದರ್ಭದಲ್ಲಿ ನಡೆದ ಯುದ್ಧದಲ್ಲಿ ನರಮೇಧ, ಅತ್ಯಾಚಾರ ಹಾಗೂ ಕಿರುಕುಳ ನೀಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಿಜಾಮಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಗಲ್ಲು ಶಿಕ್ಷೆ ಜಾರಿಯಾಗಿರುವ ಹಿನ್ನೆಲೆಯಲ್ಲಿ  ಜಮಾತ್-ಎ- ಇಸ್ಲಾಮಿಯ ಪಕ್ಷದಿಂದ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ ದೇಶಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com